Site icon PowerTV

ಚಿಕ್ಕಬಳ್ಳಾಪುರದಲ್ಲಿ ವ್ಯಕ್ತಿಯೊಬ್ಬನ ಕೊಲೆಗೆ ಯತ್ನ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರದಲ್ಲಿ ಹಾಡಹಗಲೇ ವ್ಯಕ್ತಿಯ ಕೊಲೆಗೆ ಯತ್ನ ನಡೆಸಿದ ಘಟನೆ ನಡೆದಿದೆ. ವ್ಯಕ್ತಿ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಹಿಂಬಾಲಿಸಿ ಲಾಂಗ್ ನಿಂದ ಹಲ್ಲೆ ಮಾಡಿ ಕೊಲೆಗೆ ಯತ್ನಿಸಲಾಗಿದೆ. ತಮಿಳುನಾಡು ಮೂಲದ ಯುವರಾಜ(೩೨) ಎಂಬಾತನ ಕೊಲೆಗೆ ಯತ್ನ ನಡೆದಿದೆ. ಶಿಡ್ಲಘಟ್ಟ ನಗರದ ಸಂತೆ ಬೀದಿ ಶಾಮಣ್ಣ ಬಾವಿ ಬಳಿ ಈ ಘಟನೆ ನಡೆದಿದೆ.
ಯುವರಾಜನೆಂಬ ಈ ವ್ಯಕ್ತಿ ಬರುವಾಗ ಹಿಂಬದಿಯಿಂದ ಲಾಂಗ್ ಬೀಸಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಯುವರಾಜ ಅವನ ಹೆಂಡತಿ ಸ್ವಗ್ರಾಮವಾದ ದಬರಗಾನಹಳ್ಳಿಗೆ ಬಂದಿದ್ದ ಎನ್ನಲಾಗಿದೆ. ಕೊಲೆ‌ಯತ್ನಕ್ಕೆ‌ ಕಾರಣ ತಿಳಿದು ಬಂದಿಲ್ಲ.ಗಾಯಾಳು ಯುವರಾಜನನ್ನು ಶಿಡ್ಲಘಟ್ಟದ ಸಾರ್ವಜನಿಕ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ. ಶಿಡ್ಲಘಟ್ಟ ನಗರ ಪೊಲೀಸ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Exit mobile version