Site icon PowerTV

ಬೆಂಗಳೂರಿನಲ್ಲಿ ಮತ್ತೊಂದು ಸಿಲಿಂಡರ್ ಸ್ಪೋಟ

ಬೆಂಗಳೂರು : ಸಿಲಿಂಡರ್ ಸ್ಪೋಟದಿಂದ ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಅಗ್ನಿ ಅವಘಡ ಸಂಭವಿಸಿದ ಘಟನೆ ಮೂಡಲುಪಾಳ್ಯದ ಪಂಚಶೀಲ ನಗರದಲ್ಲಿ ನಡೆದಿದೆ.

ರೀಫಿಲಿಂಗ್ ಮಾಡುತ್ತಿದ್ದ ಅನುಮಾನ ಹೊಂದಿದ್ದು, ಎರಡು ಸಿಲಿಂಡರ್ ಗಳು ಸ್ಫೋಟಗೊಂಡಿದ್ದು, ಮೂವರಿಗೆ ಸಣ್ಣಪುಟ್ಟ ಗಾಯವಾಗಿದೆ. ಸದ್ಯ ಗೋವಿಂದರಾಜನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು. ಎರಡು ಅಗ್ನಿಶಾಮಕ ವಾಹನ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ.

ಬೆಟ್ಟಯ್ಯ ಎಂಬುವವರಿಗೆ ಸೇರಿದ ಮನೆಯಾಗಿದ್ದು, ಈ ಮನೆಯಲ್ಲಿ ಇಪ್ಪತ್ತಕ್ಕೂ ಹೆಚ್ಚು ಸಿಲಿಂಡರ್ ಗಳ ಶೇಖರಣೆ ಮಾಡಲಾಗಿದೆ, ಮನೆಯಲ್ಲಿಯೇ ಗ್ಯಾಸ್ ಫಿಲಿಂಗ್ ಮಾಡುತ್ತಿದ್ದ ಬೆಟ್ಟಯ್ಯ ,16 ಮನೆ ಬಳಕೆ ಸಿಲಿಂಡರ್ , 34 ಕಮರ್ಷಿಯಲ್ ಸಿಲಿಂಡರ್, 5 ಕೆಜಿಯ 50 ಸಿಲಿಂಡರ್ ಮನೆಯಲ್ಲಿ ಪತ್ತೆಯಾಗಿದೆ. ಸಿಲಿಂಡರ್ ಬ್ಲಾಸ್ಟ್ ನಿಂದ ಮನೆಯ ಬಳಿಯೆ ಶ್ವಾನ ಸುಟ್ಟು ಹೋಗಿದೆ. ಈ ಹಿಂದೆ ಸ್ಥಳೀಯರು ದೂರು ನೀಡಿದರು ಕೇರ್ ಮಾಡದ ಬೆಟ್ಟಯ್ಯ ಹೀಗಾಗಿ ಈ ಅವಘಡ ಸಂಭವಿಸಲು ಕಾರಣವಾಯಿತು.ಬೆಟ್ಟಯ್ಯ ಮಗ ವಿನಯ್ ಹಾಗು ಮತ್ತೊಬ್ಬರಿಗೆ ಗಾಯವಾಗಿದೆ.

 

Exit mobile version