Site icon PowerTV

ಕಾರು ಬಾಡಿಗೆ ಪಡೆದು ವಂಚಿಸಿ ಸಿಕ್ಕಿಬಿದ್ದ ಆರೋಪಿಗಳು

ಬೆಂಗಳೂರು : ಕಾರು ಬಾಡಿಗೆ ಪಡೆದು ವಂಚಿಸಿದ ಪ್ರಕರಣ ಉತ್ತರ ವಿಭಾಗದ ಡಿಸಿಪಿ ವಿನಾಯಕ್ ಪಾಟೀಲ್ ಹೇಳಿಕೆ ನೀಡಿದ್ದಾರೆ.
ವಾಹನ ಮಾಲೀಕರಿಗೆ ಬಾಡಿಗೆ ಕೊಡ್ತೀನಿ ಅಂತಾ ಸುಮಾರು ನೂರ ಆರು ಜನರಿಂದ ಕಾರುಗಳನ್ನ ಬಾಡಿಗೆ ಪಡೆದಿದ್ದ ತನ್ನ ಮಾತಿನಂತೆ ಕೆಲ ತಿಂಗಳು ಮಾಲೀಕರಿಗೆ ಹಣ ಕೊಟ್ಟಿದ್ದ ಆರೋಪಿ ತನ್ನ ಸ್ನೇಹಿತರ ಜೊತೆ ಸೇರಿ, ಆಂಧ್ರ, ತಮಿಳುನಾಡಿನಲ್ಲಿ ಮಾರಿದ್ದ ನಂತರ ಬಾಡಿಗೆ ಕೊಡದಿದ್ದಾಗ ಕಾರು ಮಾಲೀಕರು ದೂರು ನೀಡಿದ್ದಾರೆ.

5 ಕೋಟಿ‌ 72ಲಕ್ಷ ಮೌಲ್ಯದ ಒಟ್ಟು 67 ಕಾರುಗಳನ್ನು ಜಪ್ತಿ ಮಾಡಲಾಗಿದೆ.. ಈ ಸಂಬಂಧ ಒಟ್ಟು ನಾಲ್ಕು ಆರೋಪಿಗಳನ್ನು ಬಂಧಿಸಲಾಗಿದೆ. ಆದರೆ ಇನ್ನೂ ಕೆಲ ಆರೋಪಿಗಳನ್ನ ಬಂಧಿಸಬೇಕಿದೆ,ಒಬ್ಬ ಆರೋಪಿ ಟೂರ್ಸ್ ಆ್ಯಂಡ್ ಟ್ರಾವೆಲ್ಸ್ ಮಾಡ್ಕೊಂಡಿದ್ದ,ಈಗಾಗಲೇ ನಾಲ್ವರು ಆರೋಪಿಗಳನ್ನ ನ್ಯಾಯಾಲಯ ಬಂಧನಕ್ಕೆ ಕಳಿಸಲಾಗಿದೆ.ಆರೋಪಿಗಳು ಬಾಡಿಗೆಗೆ ಪಡೆದ ಮರುದಿನವೇ ಮಾರಾಟ ಮಾಡುತ್ತಿದ್ದ. ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ನವೆಂಬರ್ ತಿಂಗಳಲ್ಲಿ ಚೀಟಿಂಗ್ ಕೇಸ್ ದಾಖಲಾಗಿದೆ.

Exit mobile version