Site icon PowerTV

ನೈಸ್ ರಸ್ತೆಯಲ್ಲಿ ಭೀಕರ ಸರಣಿ ಅಪಘಾತ : ನಾಲ್ವರು ಸ್ಥಳದಲ್ಲೇ ಸಾವು

ಬೆಂಗಳೂರು : ಕಾರುಗಳು ತುಂಬಿಕೊಂಡು ಹೋಗುತ್ತಿದ್ದ ಟ್ರಕ್ ಚಾಲಕನ ನಿಯಂತ್ರಣ ತಪ್ಪಿ ನಾಲ್ವರು ಸ್ಧಳದಲ್ಲೇ ಸಾವನ್ನಪ್ಪಿದ ಘಟನೆ ಬನ್ನೇರುಘಟ್ಟ – ತುಮಕೂರು ಮಾರ್ಗ ನೈಸ್ ರಸ್ತೆಯಲ್ಲಿ ನಡೆದಿದೆ.

ದುರಸ್ತಿ ಕಾರ್ಯದಿಂದ ನೈಸ್ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗಿತ್ತು,ಟ್ರಾಫಿಕ್ ಜಾಮ್ ನಿಂದಾಗಿ ರಸ್ತೆಯಲ್ಲಿ ಒಂದರ ಹಿಂದೊಂದು ನಿಂತಿದ್ದ ವಾಹನಗಳು,ಲಾರಿ ಚಾಲಕನ ಯಡವಟ್ಟಿನಿಂದಾಗಿ ಏಕಾಏಕಿ ಬಂದ ಲಾರಿ ಚಾಲಕನಿಂದ ವ್ಯಾಗನಾರ್ ಕಾರಿಗೆ ಢಿಕ್ಕಿಯಾಗಿ ಲಾರಿ ಮುಂದಿದ್ದ ವ್ಯಾಗನಾರ್ ಕಾರು ಸಂಪೂರ್ಣ ನಜ್ಜುಗುಜ್ಜಾಗಿ ಕಾರಿನಲ್ಲಿದ್ದ ನಾಲ್ವರು ಸಾವನ್ನಪ್ಪಿದ್ದಾರೆ.

ಕ್ವಾಲೀಸ್ ಕಾರಿನಲ್ಲಿದ್ದವರಿಗೆ ಗಂಭೀರ ಗಾಯವಾಗಿದ್ದು, 3ಕಾರು ಸೇರಿದಂತೆ ಒಟ್ಟು 8 ವಾಹನಗಳು ಜಖಂಗೊಂಡಿದೆ. ವ್ಯಾಗನಾರ್​ನಲ್ಲಿದ್ದ ಮೊಹಮ್ಮದ್ ಫಾದಿಲ್ (25), ಶಿಲ್ಪಾ (30), ಅಭಿಲಾಶ್ (25) ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಆದರೆ ಓರ್ವ ಯುವತಿಯ ಮಾಹಿತಿ ಇನ್ನೂ ಲಭ್ಯವಾಗಿಲ್ಲ.ಕ್ವಾಲಿಸ್ ಹಾಗೂ ಬಸ್ ನಲ್ಲಿದ್ದವರಿಗೆ ಗಂಭೀರ ಗಾಯಗೊಂಡಿದ್ದು,ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆ ಬಳಿಕ‌ ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.

Exit mobile version