Site icon PowerTV

ಇಂದು ರಾತ್ರಿ 10 ಗಂಟೆಯಿಂದ ಎಲ್ಲವೂ ಬಂದ್

ಕೋಲಾರ : ದಿನದಿಂದ ದಿನಕ್ಕೆ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುದರಿಂದ ಜಿಲ್ಲೆಯಾದ್ಯಂತ ವಿಕೇಂಡ್ ಕರ್ಫ್ಯೂ ಕಟ್ಟುನಿಟ್ಟಿನ ಕ್ರಮ ಜಾರಿಯಾಗಿದೆ.

ಕರ್ಫ್ಯೂ ಹಿನ್ನಲೆಯಲ್ಲಿ ಶನಿವಾರ ಶಾಲೆ-ಕಾಲೇಜುಗಳಿಗೆ ರಜೆಯನ್ನು ಘೋಷಿಸಲಾಗಿದೆ. ಇಂದು ರಾತ್ರಿ 10 ಗಂಟೆಯಿಂದ ಎಲ್ಲವೂ ಬಂದ್, ಕೇವಲ ಅಗತ್ಯ ಸೇವೆಗಳಿಗೆ ಮಾತ್ರ ಅವಕಾಶವನ್ನು ನೀಡಲಾಗಿದೆ. ದಿನಸಿ, ತರಕಾರಿ ಅಂಗಡಿಗಳಿಗೆ ಬೆಳಿಗ್ಗೆ 10 ಗಂಟೆವರೆಗೆ ಹೋಟೆಲ್ ಗಳಲ್ಲಿ ಪಾರ್ಸಲ್ ಗೆ ಮಾತ್ರ ಅವಕಾಶ, ಬಾರ್, ವೈನ್ ಶಾಪ್ ಗಳು ಸೋಮವಾರ ಬೆಳಿಗ್ಗೆ 5 ಗಂಟವರೆಗೂ ಕ್ಲೋಸ್ ಆಗಲಿದೆ.ಮೆಡಿಕಲ್ ಸೇವೆಗಳು, ಗೂಡ್ಸ್ ವಾಹನಗಳ ಸಂಚಾರಕ್ಕೆ ನಿರ್ಬಂಧವಿಲ್ಲ, ಹಾಗೆನೇ ನಿಯಮ ಉಲ್ಲಂಘನೆ ಮಾಡಿದರೆ ಕೇಸ್ ಮಾಡುತ್ತೇವೆ ಎಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಹೇಳಿದ್ದಾರೆ.

Exit mobile version