Site icon PowerTV

ತಾಲಿಬಾನ್​ ಬತ್ತಳಿಕೆಗೆ ಸೂಸೈಡ್​​ ಬಾಂಬರ್ಸ್​​​​

ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದ ತಾಲಿಬಾನ್​ ಸರ್ಕಾರ ರಚನೆ ಮಾಡಿ ನಾಲ್ಕು ತಿಂಗಳು ಕಳೆದಿದೆ. ಈ ನಡುವೆ ಸೇನೆಯನ್ನು ಕಟ್ಟಲು ಮುಂದಾಗಿರುವ ತಾಲಿಬಾನ್​ ತಮ್ಮ ಪ್ರತಿಸ್ಪರ್ಧಿ ಇಸ್ಲಾಮಿಕ್ ಸ್ಟೇಟ್‌ನಿಂದ ಅತಿದೊಡ್ಡ ಭದ್ರತಾ ಬೆದರಿಕೆಯನ್ನು ಎದುರಿಸುತ್ತಿದೆ.

ಇದೇ ಹಿನ್ನಲೆ ತನ್ನ ಶಕ್ತಿ ಬಲಗೊಳಿಸಲು ಮುಂದಾಗಿರುವ ತಾಲಿಬಾನ್ ಸರ್ಕಾರ ಇದೀಗ ಸೇನೆಯಲ್ಲಿ ಅಧಿಕೃತವಾಗಿ ಆತ್ಮಹತ್ಯಾ ಬಾಂಬರ್‌ಗಳನ್ನು ನೇಮಿಸಿಕೊಳ್ಳಲು ಮುಂದಾಗಿದೆ. ಕಳೆದ ವರ್ಷ ಅಧಿಕಾರಕ್ಕೆ ಬರುವ ಮೊದಲು ತಾಲಿಬಾನ್ ಇದೇ ಅಸ್ತ್ರವನ್ನು ಬಳಕೆ ಮಾಡಿತ್ತು.

ಅಫ್ಘಾನ್​ನಲ್ಲಿ ಕಳೆದ 20 ವರ್ಷಗಳ ಯುಎಸ್ ಮತ್ತು ಅಫ್ಘಾನ್ ಪಡೆಗಳ ಮೇಲೆ ದಾಳಿ ಮಾಡಲು ಮತ್ತು ಸೋಲಿಸಲು ಆತ್ಮಹತ್ಯಾ ಬಾಂಬರ್‌ಗಳನ್ನು ಈ ತಾಲಿಬಾಬ್ ಬಳಸಿಕೊಂಡಿತು. ಈಗ ಆ ಗುಂಪು ಒಂದೇ ಘಟಕದ ಅಡಿಯಲ್ಲಿ ಕಾರ್ಯನಿರ್ವಹಿಸಲು ಮತ್ತು ಅಫ್ಘಾನಿಸ್ತಾನವನ್ನು ರಕ್ಷಿಸಲು ಮುಂದಾಗಿದೆ. ಇದಕ್ಕಾಗಿ ದೇಶಾದ್ಯಂತ ಆತ್ಮಹತ್ಯಾ ಬಾಂಬರ್‌ಗಳ ಸ್ಕ್ವಾಡ್‌ಗಳನ್ನು ಸುಧಾರಿಸಲು ಮತ್ತು ಸಂಘಟಿಸಲು ಬಯಸಿದೆ ಎಂದು ತಾಲಿಬಾನ್‌ನ ಉಪ ವಕ್ತಾರ ಬಿಲಾಲ್ ಕರಿಮಿ ಹೇಳಿದ್ದಾರೆ.

Exit mobile version