Site icon PowerTV

ಸೋಲಿಗೆ ಕಾರಣ ಕೊಟ್ಟ ರಾಹುಲ್

ದಕ್ಷಿಣ ಆಫ್ರಿಕಾ : ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಟೆಸ್ಟ್​​​ ಪಂದ್ಯದ ಬಳಿಕ ಟೀಮ್​​ ಇಂಡಿಯಾ ಹಂಗಾಮಿ ನಾಯಕ ಕೆ. ಎಲ್​​ ರಾಹುಲ್​​ ಸೋಲಿನ ಪರಾಮಾರ್ಶೆ ನಡೆಸಿದ್ದಾರೆ.

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರತಿ ಟೆಸ್ಟ್ ಪಂದ್ಯವನ್ನು ನಾವು ಆಡಿದಾಗ ಗೆಲ್ಲಬೇಕೆಂದು ಭಯಸುತ್ತೇವೆ, ಅದಕ್ಕಾಗಿ ಕಠಿಣ ಪೈಪೋಟಿ ಕೂಡ ನಡೆಸುತ್ತೇವೆ. ಆದರೆ, ಈ ಬಾರಿ ದಕ್ಷಿಣ ಆಫ್ರಿಕಾ ತಂಡ ಅತ್ಯುತ್ತಮ ಆಟ ಪ್ರದರ್ಶಿಸಿತು, ಅವರು ಈ ಗೆಲುವಿಗೆ ಅರ್ಹರಾಗಿದ್ದರು. ನಾವು ನಾಲ್ಕನೇ ದಿನ ಫೀಲ್ಡ್ ಮಾಡಲು ಕಾತುರದಲ್ಲಿದ್ದೆವು, ಏನಾದರು ಹೊಸ ಪ್ರಯೋಗ ನಡೆಸಬೇಕು ಎಂಬುದು ನಮ್ಮ ಆಯ್ಕೆಯಾಗಿತ್ತು ಎಂದರು.

122 ರನ್ ಗಳಿಸುವುದು ಸುಲಭದ್ದಾಗಿರಲಿಲ್ಲ. ಪಿಚ್ ಅಪ್ ಮತ್ತು ಡೌನ್ ಇದ್ದ ಕಾರಣ ಬ್ಯಾಟಿಂಗ್ ಮಾಡಲು ಕಷ್ಟವಿತ್ತು. ಆದರೆ, ಸೌತ್ ಆಫ್ರಿಕಾ ಬ್ಯಾಟರ್​ಗಳು ಎಚ್ಚರಿಕೆಯಿಂದ ಉತ್ತಮ ಆಟವಾಡಿದರು ಎಂದು ರಾಹುಲ್ ಹೇಳಿದ್ದಾರೆ.

Exit mobile version