Site icon PowerTV

ಶಾಸಕ ರಮೇಶ್​​​ ಕುಮಾರ್​​ ವಿರುದ್ಧ ಪ್ರೊಟೆಸ್ಟ್​​​

ಕೋಲಾರ : ಶಾಸಕ ರಮೇಶ್ ಕುಮಾರ್ ವರ್ತನೆ ಖಂಡಿಸಿ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಪಟ್ಟಣ ಬಂದ್ ಮಾಡಲಾಗಿದೆ. ಮಾಜಿ ಶಾಸಕ ಹಾಗೂ ಕೋಲಾರ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಜಿಕೆ ವೆಂಕಟಶಿವಾರೆಡ್ಡಿ ನೇತೃತ್ವದಲ್ಲಿ ಬಂದ್ ಮಾಡಲಾಗಿದೆ.

ಬಸ್ ನಿಲ್ದಾಣದ ಬಳಿ ಟೈರ್‌ಗಳಿಗೆ‌ ಬೆಂಕಿ ಹಚ್ಚಿ ಜೆಡಿಎಸ್‌ ಕಾರ್ಯಕರ್ತರು ಆಕ್ರೋಶ ಹೊರ ಹಾಕಿದ್ದಾರೆ. ರಮೇಶ್ ಕುಮಾರ್ ವಿರುದ್ಧ JDS ಕಾರ್ಯಕರ್ತರು ಧರಣಿ ನಡೆಸುತ್ತಿದ್ದಾರೆ. ಜೊತೆಗೆ ಶ್ರೀನಿವಾಸಪುರ ಶಾಸಕ ರಮೇಶ್ ಕುಮಾರ್ ವಿರುದ್ಧ ಶ್ರೀನಿವಾಸಪುರ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಲಾಗುತ್ತಿದೆ. ಸ್ಥಳೀಯ ಪ್ರಕರಣವೊಂದರ ಕುರಿತು ಮಾತನಾಡಲು ಮಾಜಿ ಜಿಲ್ಲಾಪಂಚಾಯ್ತಿ ಸದಸ್ಯ ತೂಪಲ್ಲಿ ನಾರಾಯಣಸ್ವಾಮಿ ಪೊಲೀಸ್ ಠಾಣೆಗೆ ತೆರಳಿದ್ದರು.

ಈ ವೇಳೆ ರಮೇಶ್ ಕುಮಾರ್ ಕೂಡ ಠಾಣೆಗೆ ಬಂದಿದ್ದು ಪೊಲೀಸ್ ಠಾಣೆಯಲ್ಲಿ ಮುಖಾಮುಖಿಯಾಗಿದ್ದಾರೆ. ಆಗ ಪೊಲೀಸ್ ಠಾಣೆಯಲ್ಲಿ ನಾರಾಯಣಸ್ವಾಮಿ ಅವರನ್ನು ಶಾಸಕ ರಮೇಶ್‌ ನಿಂದನೆ ಮಾಡಿದ್ದಾರೆ ಎನ್ನಲಾಗಿದೆ. ಹೀಗಾಗಿ ರಮೇಶ್ ಕುಮಾರ್ ವರ್ತನೆ ಖಂಡಿಸಿ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

 

Exit mobile version