Site icon PowerTV

ಅರಣ್ಯಾಧಿಕಾರಿ ಮೇಲೆ ಕಾಡಾನೆ ದಾಳಿ

ಚಾಮರಾಜನಗರ : ಕಾಡಾನೆಯೊಂದು ಅರಣ್ಯಾಧಿಕಾರಿ ಜೀಪಿನ ಮೇಲೆ ದಾಳಿ ನಡೆಸಿ ವಾಹನವನ್ನು ತುಳಿದು ಪಲ್ಟಿ ಹೊಡೆಸಿರುವ ಘಟನೆ ಚಾಮರಾಜನಗರ ಜಿಲ್ಲೆ ನಡೆದಿದೆ.

ಚಾಮರಾಜನಗರ ಜಿಲ್ಲೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಓಂಕಾರ ವಲಯ ವ್ಯಾಪ್ತಿಗೆ ಬರುವ ಗುಂಡ್ಲುಪೇಟೆ ತಾಲೂಕಿನ ಶಿವಕುಮಾರಪುರ-ಕುರುಬರ ಹುಂಡಿ ಸಮೀಪ ಜಮೀನಿನಲ್ಲಿ ಬೀಡುಬಿಟ್ಟಿದ್ದ ಕಾಡಾನೆಯನ್ನು ಓಡಿಸಲು ಬಂದ ಅರಣ್ಯ ಸಿಬ್ಬಂದಿಯ ಜೀಪಿನ ಮೇಲೆ ಏಕಾಏಕಿ ಎರಗಿದ ಕಾಡಾನೆ ಜೀಪಿನ ಮುಂಭಾಗ ತುಳಿದು, ವಾಹನವನ್ನು ಪಲ್ಟಿ ಹೊಡೆಸಿ ರೋಷಾವೇಷ ತೋರಿದೆ.

ಸದ್ಯ, ಜೀಪಿನಲ್ಲಿ ಮೂವರು ಸಿಬ್ಬಂದಿಗಳಿಗೆ ಸಣ್ಣ ಪುಟ್ಟ ಗಾಯಾಗಳಾಗಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ‌.ಆನೆಯನ್ನು ಕಾಡಿಗಟ್ಟುವ ಕಾರ್ಯಾಚರಣೆ ಇನ್ನು ನಡೆಯುತ್ತಿದೆ.

Exit mobile version