Site icon PowerTV

ಕೊರೋನಾ ಕಾರಣದಿಂದ ಮಲೈಮಹದೇಶ್ವರನ ದರ್ಶನ ರದ್ದು

ಚಾಮರಾಜನಗರ : ದಿನೇ ದಿನೇ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದ ಹಿನ್ನಲೆಯಲ್ಲಿ ಇಂದು ಸಂಜೆ 5 ಗಂಟೆಯಿಂದಲೇ ಭಕ್ತರಿಗೆ ಪ್ರವೇಶವನ್ನು ರದ್ದುಗೊಳಿಸಿದ್ದಾರೆ.

ಶುಕ್ರವಾರ ಸಂಜೆ 5 ರಿಂದ ಸೋಮವಾರ ಬೆಳ್ಳಗೆ 7 ಗಂಟೆಯವರವಿಗೂ ಭಕ್ತರ ಪ್ರವೇಶ ರದ್ದುಮಾಡಲಾಗಿದೆ, ದಿನನಿತ್ಯ ದೇವರ ಪೂಜೆ ಕೈಂಕರ್ಯಗಳನ್ನು ಬಿಟ್ಟರೆ ಬೇರೆಲ್ಲ ಸೇವೆಗಳು ರದ್ದುಮಾಡಲಾಗಿದೆ, ದೇವಸ್ಥಾನದ ಆರ್ಚಕರು ಹಾಗೂ ಸಿಬ್ಬಂದಿಗಳಿಗೆ ಮಾತ್ರ ಪ್ರವೇಶವನ್ನು ನೀಡಲಾಗಿದೆ.

ಆನ್ ಲೈನ್ ನಲ್ಲಿ ಬುಕ್ ಮಾಡಿದ್ದರೂ ಸಹ ರೂಮ್ ಮತ್ತು ಸೇವಗಳು‌ ರದ್ದುಮಾಡಲಾಗಿದೆ. ಕೊವೀಡ್ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರದ ಆದೇಶ ಪಾಲಿಸುತ್ತಿರುವ ಹಿನ್ನಲೆಯಲ್ಲಿ ಚಾಮರಾಜನಗರ ಜಿಲ್ಲೆಯ ಮಲೈಮಹದೇಶ್ವರನ ದರ್ಶನ ಶನಿವಾರ ಮತ್ತು ಭಾನುವಾರ ಇನ್ನು ರದ್ದುಗೊಳಿಸಲಾಗಿದೆ. ಮುಂದಿನ 19 ರವರವಿಗೂ ಈ ಪಾಲನೆ ಶನಿವಾರ ಭಾನುವಾರ ಬಿಟ್ಟು ಬೇರೆ ದಿನಗಳಲ್ಲಿ ಅವಕಾಶ‌ವನ್ನು ನೀಡಲಾಗಿದೆ.

Exit mobile version