Site icon PowerTV

ಕೋವಿಡ್​ ಎಫೆಕ್ಟ್​​​​ : 9 ದೇವಸ್ಥಾನಗಳಿಗೆ ಅನಿರ್ದಿಷ್ಟ ಅವಧಿ ದರ್ಶನ ನಿರ್ಬಂಧ

ಬೆಳಗಾವಿ : ಮಹಾರಾಷ್ಟ್ರದಲ್ಲಿ ಹೆಚ್ಚಾಗಿರುವ ಕೋವಿಡ್​ ಕೇಸ್​ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ಸವದತ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನ ಸೇರಿ 9 ದೇವಸ್ಥಾನಗಳಲ್ಲಿ ಭಕ್ತರ ದರ್ಶನಕ್ಕೆ ನಿರ್ಬಂಧ.

ಬೆಳಗಾವಿ ಡಿಸಿ ಡಾ.ಎಂ.ಜಿ.ಹಿರೇಮಠ ಅವರು ಕೊರೋನಾ ಪ್ರಕರಣ ಹೆಚ್ಚಾಗಿರುವುದರಿಂದ ಗಡಿ ಜಿಲ್ಲೆಯ ದೇವಸ್ಥಾನಗಳಿಗೆ ಮಹಾರಾಷ್ಟ್ರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆಂದು ಬೆಳಗಾವಿಯಲ್ಲಿರುವ ಸುಮಾರು 9 ದೇವಸ್ಥಾನಗಳಿಗೆ ಅನಿರ್ದಿಷ್ಟ ಅವಧಿವರೆಗೂ ದರ್ಶನ ನಿರ್ಬಂಧವನ್ನು ಹೇರಿದ್ದಾರೆ.

ಬೆಳಗಾವಿ ತಾಲೂಕಿನ ಪಂಥಬಾಳೇಕುಂದ್ರಿ ದೇವಸ್ಥಾನ,ಸವದತ್ತಿ ತಾಲೂಕಿನ ಶ್ರೀ ರೇಣುಕಾ ಯಲ್ಲಮ್ಮನ ದೇವಿ ದೇವಸ್ಥಾನ, ಜೋಗಳಬಾವಿ ಸತ್ತೆಮ್ಮ ,ರಾಮದುರ್ಗ ತಾಲೂಕಿನ ಗೋಡಚಿ ವೀರಭದ್ರ ದೇವಸ್ಥಾನ, ರಾಯಬಾಗ ತಾಲೂಕಿನ ಚಿಂಚಲಿ ಮಾಯಕ್ಕಾ ದೇವಿ ದೇವಸ್ಥಾನ, ಹುಕ್ಕೇರಿ ತಾಲೂಕಿನ ಬಡಕುಂದ್ರಿ ಹೊಳೆಮ್ಮ ದೇವಿ ದೇವಸ್ಥಾನ, ಕಾಗವಾಡ ತಾಲೂಕಿನ ಮಂಗಸೂಳಿ ಮಲ್ಲಯ್ಯಾ ದೇವಸ್ಥಾನ, ಹಾಗೂ ಥಣಿ ತಾಲೂಕಿನ ಖಿಳೇಗಾಂವ ಬಸವೇಶ್ವರ ದೇವಸ್ಥಾನಗಳಿಗೆ ಇದೇ ಜನವರಿ 14 ರಿಂದ 28 ರವರೆಗೂ ಸರ್ವಧರ್ಮಿಯರ ಜಾತ್ರೆ,ಉತ್ಸವ, ಧಾರ್ಮಿಕ ಕಾರ್ಯಕ್ರಮಗಳು ಹಾಗೂ ದೇವಸ್ಥಾನದ ಪ್ರವೇಶಕ್ಕೂ ನಿಷೇಧವನ್ನು ಡಿಸಿ ಡಾ.ಎಂ.ಜಿ.ಹಿರೇಮಠ ಅವರು ಜಾರಿ ಮಾಡಿದ್ದಾರೆ.

Exit mobile version