Site icon PowerTV

ಪ್ರಧಾನಿ ನರೇಂದ್ರ ಮೋದಿ ಜೊತೆ ವೀಡಿಯೋ ಕಾನ್ಪೆರೆನ್ಸ್ ನಲ್ಲಿ ಮಾತನಾಡಲಿದ್ದಾರೆ : ಸಿಎಂ ಬೊಮ್ಮಾಯಿ

ಬೆಂಗಳೂರು: ರಾಜ್ಯದಲ್ಲಿ ಓಮಿಕ್ರಾನ್, ಕೊರೋನಾ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಕೊವಿಡ್ ಮತ್ತು ಓಮಿಕ್ರಾನ್ ಪರಿಸ್ಥಿತಿ ಬಗ್ಗೆ ಕೇಂದ್ರಕ್ಕೆ ಮಾಹಿತಿಯನ್ನು ಪ್ರಧಾನಿ ನರೇಂದ್ರ ಮೋದಿಗೆ ಸಂಪೂರ್ಣ ವರದಿಯನ್ನು ಸಿಎಂ ಬೊಮ್ಮಾಯಿ ಅವರು ಮಾಹಿತಿಯನ್ನು ನೀಡಲಿದ್ದಾರೆ.

ಇಂದು ಪ್ರಧಾನಿ ನರೇಂದ್ರ ಮೋದಿಯಿಂದ ವೀಡಿಯೋ ಕಾನ್ಪೆರೆನ್ಸ್ ನಲ್ಲಿ ಮಾತನಾಡಲಿದ್ದಾರೆ. ವೀಡಿಯೋ ಕಾನ್ಪೆರೆನ್ಸ್ ಗಾಗಿಯೇ ಸಮಯ ನಿಗಧಿ ಮಾಡಿಕೊಂಡಿರುವ ಸಿಎಂ ರಾಜ್ಯದ ಕೊರೋನಾ ಪರಿಸ್ಥಿತಿ ನಿರ್ವಹಣೆ, ನಿಯಂತ್ರಣ, ಬಿಗಿ ಕ್ರಮಗಳ ಕುರಿತ ವರದಿಯನ್ನು ಸಲ್ಲಿಸಲಿದ್ದಾರೆ.

ಅಂತರರಾಷ್ಟ್ರೀಯ ವಿಮಾನಗಳಿಂದ ಹೆಚ್ಚಾಗ್ತಿರುವ ಒಮಿಕ್ರಾನ್ ಬಗ್ಗೆಯೂ ಪ್ರಸ್ತಾಪ ಮಾಡಲಿದ್ದಾರೆ. ವೀಡಿಯೋ ಕಾನ್ಪೆರೆನ್ಸ್ ನಲ್ಲಿ ಮತ್ತಷ್ಟು ಬಿಗಿ ಕ್ರಮಗಳ ಬಗ್ಗೆ ಹಾಗೂ ನಿಯಂತ್ರಣ, ನಿರ್ವಹಣೆ ಬಗ್ಗೆ ಸಲಹೆಯನ್ನು ನೀಡಲಿದ್ದಾರೆ. ಮತ್ತಷ್ಟು ಬಿಗಿ ಕ್ರಮಗಳ ಬಗ್ಗೆ ಪ್ರಸ್ತಾಪಸಲು ಸಿಎಂ ಸಜ್ಜಾಗಿದ್ದಾರೆ.

Exit mobile version