Site icon PowerTV

ಪ್ರಧಾನಿ ಮೋದಿ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸಿ ಹೋಮ – ಹವನ

ಹುಬ್ಬಳ್ಳಿ : ಪಂಜಾಬ್ ಅಲ್ಲಿ ಆದ ಘಟನೆಯಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಯಾವುದೇ ರೀತಿಯ ತೊಂದರೆಯಾಗದಿರಲಿ ಎಂದು ಹಾಗೂ ಅವರ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸಿ ಹುಬ್ಬಳ್ಳಿ ಧಾರವಾಡ ಕೇಂದ್ರ ಮಹಿಳಾ ಮೋರ್ಚಾ ವತಿಯಿಂದ ಹೋಮ – ಹವನ ನಡೆಸಲಾಯಿತು.

ಜಯನಗರದ ಈಶ್ವರ ದೇವಸ್ಥಾನದಲ್ಲಿ ಮಹಾ ಮೃತ್ಯುಂಜಯ ಹೋಮ ಹಾಗೂ ಜಪ ಕಾರ್ಯಕ್ರಮ ಆಯೋಜನೆ ಮಾಡಿದ್ದ ಮಹಿಳಾ ಮೋರ್ಚಾ ಪದಾಧಿಕಾರಿಗಳು ಮತ್ತು ಮಹಾನಗರ ಪಾಲಿಕೆ ಸದಸ್ಯರು ಪ್ರಧಾನಿ ಮೋದಿ ಅವರಿಗೆ ಯಾವುದೇ ತೊಂದರೆಗಳು ಆಗದಿರಲಿ, ಮೋದಿ ದೀರ್ಘಾಯುಷಿಯಾಗಿ ಬಾಳಲಿ ಎಂದು ಅವರ ಹೆಸರಿನಲ್ಲಿ ಪೂಜಾ, ಪ್ರಾರ್ಥನೆ ಸಲ್ಲಿಸಿದ್ದಾರೆ.

ಪ್ರಧಾನಿ ‌ನರೇಂದ್ರ ಮೋದಿಯವರು ಪಂಜಾಬ್ ಪ್ರವಾಸದ ವೇಳೆ ಭದ್ರತಾ ಲೋಪ ಉಂಟಾಗಿ, ಕೆಲ‌ಗಂಟೆಗಳ ಕಾಲ ಟ್ರಾಫಿಕ್​​ನಲ್ಲಿ ಸಿಲುಕಿದರು. ಇದರಿಂದ ಭಯಭೀತರಾಗಿ ಇನ್ನು ಮೇಲೆ ಪ್ರಧಾನಿ‌ಮೋದಿಯವರಿಗೆ ಯಾವುದೇ ವಿಘ್ನಗಳು ಬಾರದಿರಲಿ ಎಂದು ಬಿಜೆಪಿ ಹೋಮ ಹವನವನ್ನು ನೇರವೇರಿಸಿದ್ದಾರೆ.

Exit mobile version