Site icon PowerTV

ಜೂಲನ್ ಗೋಸ್ವಾಮಿಯಾಗಿ ಅನುಷ್ಕಾ ಶರ್ಮಾ

ಬಾಲಿವುಡ್​​ನಲ್ಲಿ ಕ್ರಿಕೆಟ್​​​ಗೆ ಸಂಬಂಧಿಸಿದಂತೆ ಹಲವು ಸಿನಿಮಾಗಳು ಬರುತ್ತಿವೆ. ಇದೀಗ ಭಾರತೀಯ ಮಹಿಳಾ ಕ್ರಿಕೆಟ್​​​ನ ಲೆಜೆಂಡರಿ ಬೌಲರ್ ಜೂಲನ್ ಗೋಸ್ವಾಮಿ ಬಯೋಪಿಕ್ ಸಿದ್ಧವಾಗುತ್ತಿದ್ದು, ಈ ಪಾತ್ರದಲ್ಲಿ ಅನುಷ್ಕಾ ಶರ್ಮಾ ಕಾಣಿಸಿಕೊಳ್ಳುತ್ತಿದ್ದಾರೆ.

ಈ ಕುರಿತು ಅವರೇ ‘ಚಕ್ಡಾ ಎಕ್ಸ್‌ಪ್ರೆಸ್‌’ ಸಿನಿಮಾದ ಟೈಟಲ್ ಪೋಸ್ಟರ್ ಮತ್ತು ಟೀಸರ್ ಅನ್ನು ಸೋಶಿಯಲ್ ಮೀಡಿಯಾದಲ್ಲಿ ಬಿಡುಗಡೆ ಮಾಡಿದ್ದಾರೆ. ಈ ಸಿನಿಮಾ ನೆಟ್‍ಫ್ಲಿಕ್ಸ್ ಓಟಿಟಿಯಲ್ಲಿ ಬರಲಿದೆ ಎಂದು ತಿಳಿಸಿದ್ದಾರೆ. ಈ ಕುರಿತು ಅನುಷ್ಕಾ ಟ್ವಿಟ್ಟರ್ ನಲ್ಲಿ, ಇದು ನಿಜವಾಗಿಯೂ ವಿಶೇಷ ಸಿನಿಮಾವಾಗಿದೆ. ಏಕೆಂದರೆ ಇದು ಅದ್ಭುತ ತ್ಯಾಗದ ಕಥೆಯಾಗಿದೆ.

ಭಾರತ ತಂಡದ ಮಾಜಿ ನಾಯಕಿ ಜೂಲನ್ ಗೋಸ್ವಾಮಿ ಅವರ ಜೀವನ ಆಧಾರಿತ ಕಥೆಯೇ ‘ಚಕ್ಡಾ ಎಕ್ಸ್‌ಪ್ರೆಸ್‌’. ಇದು ಮಹಿಳಾ ಕ್ರಿಕೆಟ್ ಜಗತ್ತಿನಲ್ಲಿ ಕಣ್ಣು ತೆರೆಸಿದ ಕಥೆ. ಜೂಲನ್ ಅವರು ಕ್ರಿಕೆಟರ್ ಆಗಲು ಎದುರಿಸಿದ ಕಠಿಣ ಸಮಯವನ್ನು ಈ ಚಿತ್ರ ನಿಮ್ಮ ಕಣ್ಣು ಮುಂದೆ ತೋರಿಸುತ್ತದೆ. ಜೂಲನ್ ಅವರ ಜೀವನ ಮತ್ತು ಮಹಿಳಾ ಕ್ರಿಕೆಟ್ ಅನ್ನು ರೂಪಿಸಿದ ಹಲವಾರು ನಿದರ್ಶನಗಳನ್ನ ಈ ಸಿನಿಮಾ ಪ್ರೇಕ್ಷಕರಿಗೆ ತಿಳಿಸಿಕೊಡುತ್ತದೆ ಎಂದು ಬರೆದು ಟ್ವೀಟ್ ಮಾಡಿದ್ದಾರೆ.

Exit mobile version