Site icon PowerTV

9 ಜನ ಪಕ್ಷೇತರರು ಬಿಜೆಪಿಗೆ ಸೇರ್ಪಡೆ

ಬಳ್ಳಾರಿ : ವಿಜಯನರ ಜಿಲ್ಲೆಯಾದ ಬಳಿಕ ಮೊದಲ ಬಾರಿ ನಡೆದ ಚುನಾವಣೆಯಲ್ಲಿ 35 ವಾರ್ಡ್ ಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 10 ವಾರ್ಡ್ ಗಳಲ್ಲಿ ಗೆಲವು ಸಾಧಿಸಿತ್ತು. ಪಕ್ಷೇತರರು 12 ವಾರ್ಡ್ ಕಾಂಗ್ರೆಸ್ 12 ವಾರ್ಡ್,ಒಂದು ವಾರ್ಡ್ ನಲ್ಲಿ ಆಮ್ ಆದ್ಮಿ ಅಭ್ಯರ್ಥಿ ಗೆಲವು ಸಾಧಿಸಿದ್ದರು.

ಆದರೆ ಇದೀಗ 9 ಜನ ಪಕ್ಷೇತರರು ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಸಚಿವ ಆನಂದ್ ಸಿಂಗ್ ನೇತೃತ್ವದಲ್ಲಿ 9 ಜನ ಪಕ್ಷೇತರರು ಬಿಜೆಪಿ ಸೇರಿದ್ದಾರೆ. 19 ನೇ ವಾರ್ಡ್,ಕೆ.ಶಾಂತಾ,32 ನೇ ವಾರ್ಡ್ ನ ಹನುಮಂತವ್ವ,11 ನೇ ವಾರ್ಡ್ ಖಾಜಾ ಬನ್ನಿ,25 ನೇ ವಾರ್ಡ್ ಸಣ್ಣ ದುರಗಮ್ಮ,30 ನೇ ವಾರ್ಡ್ ನ ಎ.ಲತಾ,14 ನೇ ವಾರ್ಡ್ ಶರವಣನ್,31 ನೇ ವಾರ್ಡ್ ಜಂಬೂನಾಥ್,22 ನೇ ವಾರ್ಡ್ ಶೇಖಷಾವಲಿ ಹಾಗೂ 13 ನೇ ವಾರ್ಡ್ ಹನುಮಂತಪ್ಪ ಬಿಜೆಪಿ ಸೇರ್ಪಡೆಗೊಂಡಿದ್ದಾರೆ.

ವಿಜಯನಗರ ಜಿಲ್ಲೆಯಾದ ಬಳಿಕ ನಡೆದ ಮೊದಲ ನಗರಸಭೆ ಚುನಾವಣೆ ಗೊಂಡಿತ್ತು.ಇದೀಗ 19 ಕ್ಕೇರಿದ ಬಿಜೆಪಿ ಸಂಖ್ಯೆ, ಪಕ್ಷಕ್ಕೆ ಸೇರಿಸಿಕೊಂಡು ಚುನಾವಣೆ ರಾಜಕೀಯ ಚದುರಂಗದಾಟ ಆಡುತ್ತಿದ್ದಾರೆ. ಯಾವ ದಾಳ ಯಾವಾಗ ಬಳಸಬೇಕು ಎಂದು ಆನಂದ್ ಸಿಂಗ್ ಹೇಳಿದ್ದಾರೆ.

Exit mobile version