Site icon PowerTV

Weekend Curfew : ಟ್ಯಾಕ್ಸಿ ಮಾಲೀಕರ ಆಕ್ರೋಶ

ರಾಜ್ಯ : ಕೋವಿಡ್ ತಡೆಗೆ ಸರ್ಕಾರ ಕೈಗೊಂಡಿರೋ ವೀಕೆಂಡ್ ಕರ್ಫ್ಯೂ ರೂಲ್ಸ್ ಬಗ್ಗೆ ಟ್ಯಾಕ್ಸಿ ಮಾಲೀಕರಿಂದ ಆಕ್ರೋಶ ವ್ಯಕ್ತವಾಗಿದೆ.

ರಾಜ್ಯದ್ಯಂತ ಕೋವಿಡ್​ ಹೆಚ್ಚುತ್ತಿರುವ ಪರಿಣಾಮವಾಗಿ ಸರ್ಕಾರವು ಜನರ ಸುರಕ್ಷತೆಗೆ ಎಲ್ಲಾ ಕಡೆ ವೀಕೆಂಡ್​ ಕರ್ಫ್ಯೂ ರೂಲ್ಸ್ ಜಾರಿಮಾಡಲಾಗಿದೆ. ಆದರೆ ಇದರಿಂದ ನಿರಾಸೆಯಾಗಿರುವ  ಟ್ಯಾಕ್ಸಿ ಮಾಲೀಕರು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಎರಡು ಡೋಸ್ ಲಸಿಕೆ ಪಡೆದಿರೋದು ವೇಸ್ಟ್ ಆಯ್ತಾ ? ಹಾಗಿದ್ರೆ ಕೋವಿಡ್ ಲಸಿಕೆ ಪಡೆದಿರೋದ್ರಿಂದ ಲಾಭವಾದ್ರು ಏನು? ಕೋವಿಡ್ ಲಸಿಕೆಯಲ್ಲಿ ರೋಗ ನಿರೋಧಕ ಶಕ್ತಿ ಇಲ್ವಾ? ಮತ್ಯಾವ ಉದ್ದೇಶದಿಂದ ಕೋವಿಡ್ ಲಸಿಕೆ ನೀಡಿದ್ರಿ.? ಲಸಿಕೆ ಪಡೆದ ಮೇಲೆ ಕೋವಿಡ್ ನಿರ್ಭಂದಗಳು ಯಾಕೆ ಬೇಕು?ವಾರಾಂತ್ಯದ ಕರ್ಫ್ಯೂ ಯಾಕೆ ವಿಧಿಸಿದ್ರಿ? ಇದರಿಂದ ಖಾಸಗಿ ಸಾರಿಗೆ ಸಂಸ್ಥೆಗಳಿಗೆ ಸೇರಿದಂತೆ ಉಳಿದ ಕ್ಷೇತ್ರಗಳಿಗೆ ಆಗುತ್ತಿರುವ ನಷ್ಟದ ಪರಿ ನಿಮಗಿದೆಯೆ? ಎಂದು ಟ್ವೀಟ್ ಮಾಡೋ ಮೂಲಕ ಟ್ಯಾಕ್ಸಿ ಮಾಲೀಕರ ಸಂಘ ಆಕ್ರೋಶ ವ್ಯಕ್ತಪಡಿಸಿದೆ.

Exit mobile version