Site icon PowerTV

ಸಿಎಂ-ರಮೇಶ್‌ ಜಾರಕಿಹೊಳಿ ಭೇಟಿ

ಕರ್ನಾಟಕ : ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಚರ್ಚೆ ಜೋರಾಗಿದೆ. ಸಂಕ್ರಾಂತಿ ವೇಳೆಗೆ ಹೊಸ ಸಂಪುಟ ರಚನೆಯಾಗಬಹುದು ಎಂಬ ಗುಸು ಗುಸು ಕೇಳಿಬರುತ್ತಿದೆ. ಅಲ್ಲದೇ ಕೆಲ ಹಳಬರಿಗೆ ಕೊಕ್ ನೀಡಿ ಹೊಸ ಮುಖಗಳನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗುತ್ತದೆ ಎನ್ನುವ ಸುದ್ದಿಯು ಜೋರಾಗಿದೆ.

ಇದರ ಬೆನ್ನಲ್ಲೇ ಇದೀಗ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿದ್ದಾರೆ. ಈ ಭೇಟಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಸಿಎಂ ಬೊಮ್ಮಾಯಿ ಅವರ ಆರ್ ಟಿ ನಗರ ನಿವಾಸದಲ್ಲಿ ಭೇಟಿಯಾದ ರಮೇಶ್ ಜಾರಕಿಹೊಳಿ ಸುದೀರ್ಘ ಚರ್ಚೆ ನಡೆಸಿದ್ದಾರೆ.

ಸಂಪುಟ ಪುನರ್​​ರಚನೆ ಎಂಬ ಸುದ್ದಿ ಬೆನ್ನಲ್ಲೇ ಸಿಎಂ ಭೇಟಿಯಾಗಿರುವ ರಮೇಶ್ ಜಾರಕಿಹೊಳಿ ನಡೆಯು ಕುತೂಹಲಕ್ಕೆ ಕಾರಣವಾಗಿದೆ. ಇನ್ನು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಜೊತೆಯೇ ಸಿಎಂ ಭೇಟಿಗೆ ಮಹೇಶ್ ಕುಮಟಹಳ್ಳಿ ಸಹ ಆಗಮಿಸಿದ್ದು ಇನ್ನಷ್ಟು ಕುತೂಹಲ ಮೂಡಿಸಿದೆ.

Exit mobile version