Site icon PowerTV

ಕಿಡಿಗೇಡಿಗಳಿಂದ ರಾಗಿಮೆದೆಗೆ ಬೆಂಕಿ

ರಾಮನಗರ : ಚನ್ನಪಟ್ಟಣ ತಾಲೂಕಿನ ಅರಳಾಪುರ ಗ್ರಾಮದಲ್ಲಿ ಮತ್ತೆ ರಾಗಿಮೆದೆಗೆ ಬೆಂಕಿ ಹಚ್ಚಲಾಗಿದೆ.

ತಡರಾತ್ರಿ ರಾಗಿಮೆದೆಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದು ಕಳೆದ ಮೂರುದಿನಗಳ ಹಿಂದೆಯಷ್ಟೆ ಕೃಷ್ಣ ಎಂಬುವನ ರಾಗಿಮೆದೆಗೆ ಬೆಂಕಿ ಹಚ್ಚಲಾಗಿತ್ತು ಈ ಘಟನೆ ಬೆನ್ನಲ್ಲೆ ತಡರಾತ್ರಿ ಮತ್ತೆ ಕೃಷ್ಣ ಅವರ ಮೆದೆಗೆ ಬೆಂಕಿ ಹಚ್ಚಲಾಗಿದೆ.

ಬೆಂಕಿಯ ತೀವ್ರತೆಗೆ ಮೆದೆಯ ಪಕ್ಕದಲ್ಲಿದ್ದ ತಿಮ್ಮಪ್ಪಶೆಟ್ಟಿ ಎಂಬುವರ ಮನೆಗೂ ಬೆಂಕಿ ಹೊತ್ತಿಕೊಂಡು ಮನೆಯ ಒಂದು ಭಾಗ ಬೆಂಕಿಯಿಂದ ಸಂಪೂರ್ಣ ಜಖಂ ಆಗಿದೆ. ಸದ್ಯ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ, ಘಟನೆ ಸಂಬಂಧ ಎಂ.ಕೆ.ದೊಡ್ಡಿ ಪೊಲೀಸ್ ಠಾಣಾಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version