Site icon PowerTV

ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಗೆ ಕರ್ನಾಟಕದ ಆಟಗಾರ್ತಿ

ಮಹಿಳೆಯರ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಗೆ ಆಯ್ಕೆಯಾಗಿರುವ ತಂಡದಲ್ಲಿ ಕರ್ನಾಟಕದ ವನಿತೆ ಸ್ಥಾನ ಗಿಟ್ಟಿಸಿದ್ದಾಳೆ. ಹೌದು, ಅನುಭವಿ ಸ್ಪಿನ್ನರ್ ಆಗಿರುವ ರಾಜೇಶ್ವರಿ ಗಾಯಕವಾಡ್ ಭಾರತ ತಂಡದಲ್ಲಿ ಸ್ಥಾನ ಗಿಟ್ಟಿಸಿದ ಕರ್ನಾಟಕದ ಮಹಿಳೆ. ತಂಡದ ಕ್ಯಾಪ್ಟನ್ ಮಿಥಾಲಿ ರಾಜ್ ಆಗಿದ್ದು, ಹರ್ಮನ್ ಪ್ರಿತ್​ಕೌರ್ ವೈಸ್​ಕ್ಯಾಪ್ಟನ್ ಆಗಿದ್ದಾರೆ. ಮುಂದಿನ ತಿಂಗಳು ನ್ಯೂಜಿಲೆಂಡ್​ನಲ್ಲಿ ನಡೆಯುವ ಏಕದಿನ ಸರಣಿ ಪಂದ್ಯಗಳಿಗೂ ಇದೇ ತಂಡ ಇರಲಿದೆ. ಮಾರ್ಚ್​ 4 ರಿಂದ 13ರವರೆಗೆ ಈ ವಿಶ್ವಕಪ್ ಟೂರ್ನಿ ನ್ಯೂಜೆಲೆಂಡ್​ನಲ್ಲಿ ನಡೆಯಲಿದೆ.

15 ಜನರ ತಂಡದಲ್ಲಿ ಅಗ್ರ ಬ್ಯಾಟ್ಸ್​ಮನ್ ಆಗಿದ್ದ ಜೆಮಿಯಾ ರಾಡ್ರಿಗಸ್ ಹಾಗೂ ಫಾಸ್ಟ್ ಬೌಲರ್ ಶಿಖಾ ಪಾಂಡೆಯವರನ್ನು ಕೈಬಿಡಲಾಗಿದೆ. ಎಡಗೈ ಬ್ಯಾಟ್ಸ್​ಮನ್ ಯಾಷ್ಟಿಕಾ ಭಾಟಿಯಾ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸಿಕೊಳ್ಳಲಾಗಿದೆ. ವೇಗದ ಬೌಲರ್​ಗಳಾದ ಮೇಘನಾ ಸಿಂಗ್ ಹಾಗೂ ರೇಣುಕಾಸಿಂಗ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

 

Exit mobile version