Site icon PowerTV

ಬೇಕಾಬಿಟ್ಟಿ ರಸ್ತೆಗೆ ಬಂದ್ರೆ ‘ಕ್ರಿಮಿ’ನಲ್ ಕೇಸ್..!

ಕರ್ನಾಟಕ : ರಾಜ್ಯ ಸರ್ಕಾರದ ಉದ್ದೇಶಿತ ವೀಕೆಂಡ್ ಲಾಕ್‌ಡೌನ್ ಕುರಿತು ಬೆಂಗಳೂರು ಪೊಲೀಸರು ಮಹತ್ವದ ಮೀಟಿಂಗ್ ನಡೆಸಿದರು. ಮೀಟಿಂಗ್‌ನಲ್ಲಿ ಏನೆಲ್ಲಾ ಚರ್ಚಿಸಲಾಯಿತು, ವಿಕೇಂಡ್ ಲಾಕ್ ಡೌನ್‌ನಲ್ಲಿ ಪೊಲೀಸರ ಗಸ್ತು ಹೇಗಿರಲಿದೆ?

ಕೊರೋನಾ ತೀವ್ರ ಹೆಚ್ಚಳದಿಂದಾಗಿ ರಾಜ್ಯ ಸರ್ಕಾರ ರಾಜಧಾನಿ ಬೆಂಗಳೂರಿನಲ್ಲಿ ವಿಕೇಂಡ್ ಲಾಕ್ ಡೌನ್ ಜಾರಿ ಮಾಡಿದೆ. ಹೀಗಾಗಿ ಇದನ್ನು ಕಟ್ಟುನಿಟ್ಟಾಗಿ ಜಾರಿ ಮಾಡಲು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಹಿರಿಯ ಪೊಲೀಸ್ ಅಧಿಕಾರಿಗಳ ಮಹತ್ವದ ಸಭೆ ನಡೆಸಿದರು. ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತರು ಹಾಗೂ ಎಲ್ಲಾ ವಿಭಾಗದ ಡಿಸಿಪಿಗಳು ಭಾಗಿಯಾಗಿದ್ದರು. ಈ ವೇಳೆ ಕಮಿಷನರ್ ಕಮಲ್ ಪಂತ್ ಅವರು ಸರ್ಕಾರ ಜಾರಿ ಮಾಡಿರುವ ಅಷ್ಟೂ ರೂಲ್ಸ್‌ಗಳನ್ನು ಕಟ್ಟುನಿಟ್ಟಾಗಿ ಜಾರಿ ಮಾಡಲಾಗುವುದು ಎಂದರು.

ಕಮಲ್ ಪಂತ್ ಕುಂಟು ಅವರು ನೆಪ ಹೇಳಿಕೊಂಡು ರಸ್ತೆಗೆ ಬಂದವರ ಮೇಲೆ ಕ್ರಿಮಿನಲ್ ಕೇಸ್  ಹಾಕಲಾಗುವುದು. ಜೊತೆಗೆ ನಗರಾದ್ಯಂತ ಬಿಗಿ ಪೊಲೀಸ್ ಚೆಕಿಂಗ್ ಇರಲಿದೆ. ವಿನಾಯಿತಿ ಇರುವವರು ಸರಿಯಾದ ದಾಖಲೆ ತೋರಿಸಿ ಓಡಾಡಬೇಕು.ಪೊಲೀಸ್ ಇಲಾಖೆಯಿಂದ ಯಾವುದೇ ಪಾಸ್ ನೀಡುವುದಿಲ್ಲ.ಕಳೆದ ಬಾರಿಯ ಲಾಕ್‌ಡೌನ್‌ನಲ್ಲಿ ಜನ ಪೊಲೀಸರಿಗೆ ಸಹಕಾರ ನೀಡಿದ್ದಾರೆ.ಹಾಗಾಗಿ ಈ ಬಾರಿಯೂ ಜನರು ಸಹಕಾರ ನೀಡಬೇಕು ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಕೇಳಿಕೊಂಡರು.

ಒಟ್ಟಿನಲ್ಲಿ ಸರ್ಕಾರದ ವಿಕೇಂಡ್ ಲಾಕ್‌ಡೌನ್ ಕಟ್ಟುನಿಟ್ಟಾಗಿ ಜಾರಿಗೊಳಿಸಲು ಪೊಲೀಸ್ ಇಲಾಖೆ ಸರ್ವ ರೀತಿಯಲ್ಲೂ ಸಿದ್ಧವಾಗಿದೆ.

Exit mobile version