Site icon PowerTV

ದಲಿತ ಸಿಎಂ ಚೆನ್ನಿ ಕೆಳಗಿಳಿಸಲು ಬಿಜೆಪಿ ಹುನ್ನಾರ- ಖರ್ಗೆ

ಬೆಂಗಳೂರು: ದೇಶದಲ್ಲಿ ಪ್ರಥಮ ದಲಿತ ಸಿಎಂ ಚೆನ್ನಿ ಸರ್ಕಾರ ಕೆಳಗಿಳಿಸೋಕೆ ಬಿಜೆಪಿಯವರು ಭದ್ರತಾ ಲೋಪದ ಆರೋಪ ಹೊರಿಸಲು ಬಿಜೆಪಿಯವರು ಯತ್ನಿಸುತ್ತಿದ್ದಾರೆ. ಹೌದು, ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಹೀಗೆ ಆರೋಪಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಖರ್ಗೆ, ಪ್ರಧಾನಿ ಪಂಜಾಬ್ ರ್ಯಾಲಿಗೆ ತಡೆ ವಿಚಾರದಲ್ಲಿ ಮಾಧ್ಯಮಗಳಲ್ಲಿ ತಪ್ಪು ಮಾಹಿತಿ ನೀಡಲಾಗ್ತಿದೆ. ಸರ್ಕಾರ ಹಾಗೂ ಬಿಜೆಪಿ ವಕ್ತಾರರು ಬಾಯಿಗೆ ಬಂದಂತೆ ಹೇಳಿಕೆ ನೀಡ್ತಿದ್ದಾರೆ. ಪಂಜಾಬ್ ಸರ್ಕಾರದ ಮೇಲೆ ಗೂಬೆ ಕೂರಿಸೋಕೆ ಹೊರಟಿದ್ದಾರೆ ಎಂದು ಆರೋಪಿಸಿದರು.

Exit mobile version