Site icon PowerTV

ಸಚಿವ ಮಾಧುಸ್ವಾಮಿಯನ್ನು ಕಿಮ್​ಜಾನ್​ಉನ್​ಗೆ ಹೋಲಿಸಿದ ಸಂಸದ ಬಸವರಾಜು

ತುಮಕೂರು: ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಗುಸು ಗುಸು ಸಂಚಲ ಮೂಡಿಸಿದೆ. ಜಿಲ್ಲೆಯಲ್ಲಿ ವಿವಿಧ ಕಟ್ಟಡಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಬಳಿ ಸಂಸದ ಜಿ.ಎಸ್.ಬಸವರಾಜು ಅವರು ಸಚಿವ ಮಾಧುಸ್ವಾಮಿ ಬಗ್ಗೆ ಚಾಡಿ ಹೇಳುತ್ತಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ. ಮಾತಾಡಿದ್ರೆ ಹೋಯ್ತು, ಮುತ್ತು ಒಡೆದ್ರೆ ಹೋಯ್ತು ಎಂಬಂತೆ ಹರಕು ಬಾಯಿಯ ಬಸವರಾಜು ಈಗ ತಾವಾಡಿದ ಮಾತಿಗೆ ಅಂಡುಸುಟ್ಟ ಬೆಕ್ಕಿನಂತಾಡುತ್ತಿದ್ದಾರೆ.

‘ನಮ್ಮ ಮಂತ್ರಿ ಹೆಂಗೆ ಅಂದ್ರೆ, ಕೊರಿಯಾ ಕಿಂಗ್ ಇದ್ದಾನಲ್ಲ ಆ ತರ. ಕೆಟ್ಟ ನನ್ಮಗ, ಇವನಿಂದ ನಮ್ಮ ಜಿಲ್ಲೆಯಲ್ಲಿ ಒಂದು ಸೀಟೂ ಬರಲ್ಲ. ಮಾತು ಎತಿದರೆ ಹೊಡಿ ಬಡಿ ಅಂತಾನೆ. ನಮ್ಮ ಜಿಲ್ಲೆನ ಹಾಳು ಮಾಡಿ ಬಿಟ್ಟಿದ್ದಾನೆ’ ಎಂದು ಸಚಿವರ ಕಿವಿಯಲ್ಲಿ ಸಂಸದರು ಪಿಸುಗುಟ್ಟಿದ್ದಾರೆ. ಸಚಿವ ಭೈರತಿ, ಆಮೇಲೆ ಮಾತಾಡೋಣ ಸುಮ್ಮನಿರು ಅಂದರೂ ನಿಲ್ಲಿಸದ ಸಂಸದರು ಚಾಡಿ ಹೇಳುವುದನ್ನು ಮುಂದುವರೆಸಿರೋದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.

Exit mobile version