ಬಂಡೀಪುರ: ಒಂದಲ್ಲ ಎರಡಲ್ಲ ಬಂಡೀಪುರದ ಮರದ ಮೇಲೆ ನಿನ್ನೆ ಮೂರು ಚಿರತೆಗಳು ಪ್ರತ್ಯಕ್ಷವಾಗಿವೆ. ಸಫಾರಿಗೆ ಹೋದರೆ ಒಂದು ಚಿರತೆ ಕಾಣೋದೇ ಅಪರೂಪ. ಚಿರತೆ ಎಂದಾಕ್ಷಣ ರಸ್ತೆ ದಾಟುವುದು, ಮರದ ಮೇಲೆ ಬೇಟೆ ತಿನ್ನುವ ದೃಶ್ಯಗಳು ಸಾಮಾನ್ಯ. ಆದ್ರೆ, ಇಲ್ಲಿ ಒಟ್ಟಿಗೆ ಮೂರು ಚಿರತೆಗಳು ಕಾಣಿಸಿಕೊಂಡಿರುವುದು ಮಾತ್ರ ರೋಮಾಂಚಕ ದೃಶ್ಯವಾಗಿದೆ. ವನ್ಯಜೀವಿ ಛಾಯಾಗ್ರಾಹಕ ಅಬ್ದುಲ್ ಅಜೀಜ್ ಎಂಬವರ ಕ್ಯಾಮರಾದಲ್ಲಿ ಈ ಅಪರೂಪದ ದೃಶ್ಯ ಸೆರೆಯಾಗಿದ್ದು, ಮರದ ಕೊಂಬೆ ಮೇಲೆ ಕುಳಿತು ಚಿರತೆಗಳು ಸಫಾರಿಗರನ್ನೇ ದಿಟ್ಟಿಸಿ ನೋಡುತ್ತಿತ್ತು.
ಚಾಮರಾಜನಗರ ಜಿಲ್ಲೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ಸಫಾರಿಗರಿಗೆ ವನ್ಯಪ್ರಾಣಿಗಳು ಸಖತ್ ದರ್ಶನ ನೀಡುತ್ತಿದ್ದು, ಹುಲಿ, ಆನೆ ಹಿಂಡುಗಳು ಕೂಡ ಪ್ರವಾಸಿಗರ ಕಣ್ಣಿಗೆ ಆಗಾಗ್ಗೆ ಕಾಣಿಸಿಕೊಳ್ಳುತ್ತಿರುತ್ತವೆ.