Site icon PowerTV

ಹೆದ್ದಾರಿ ಮೇಲೆ ಉರುಳಿದ ಬೃಹತ್ ಬಂಡೆ

ಕಾರವಾರ: ಕಾರವಾರ ಹೆದ್ದಾರಿ ಮೇಲೆ ಬೃಹತ್ ಗಾತ್ರದ ಬಂಡೆಗಲ್ಲೊಂದು ಉರುಳಿಬಿದ್ದಿದೆ. ಈ ಘಟನೆ ಉತ್ತರಕನ್ನಡ ಜಿಲ್ಲೆಯ ಹೊನ್ನಾವರದ ರಾಷ್ಟ್ರೀಯ 66ರ ಹೊಸಪಟ್ಟಣ ಗ್ರಾಮದ ಬಳಿ ನಡೆದಿದೆ.

ಐಆರ್​ಬಿ ಕಂಪೆನಿಯು ಹೆದ್ದಾರಿ ಅಗಲೀಕರಣಕ್ಕಾಗಿ ಗುಡ್ಡದ ಮೇಲೆ ಮಣ್ಣು ತೆಗೆಯುವ ವೇಳೆ ಬಂಡೆಕಲ್ಲು ಉರುಳಿ ಬಿದ್ದಿದೆ. ಗುಡ್ಡದ ಕೆಳಗೇ ರಾಷ್ಟ್ರೀಯ ಹೆದ್ದಾರಿ ಹಾದು ಹೋಗುತ್ತಿದ್ದು, ಅದೃಷ್ಟವಶಾತ್ ಭಾರೀ ದುರಂತ ನಡೆಯುವುದು ತಪ್ಪಿದೆ. ಸದ್ಯ ವಾಹನ ಸವಾರರು ಆತಂಕದಲ್ಲೇ ಸಂಚರಿಸಬೇಕಾಗಿದೆ.

Exit mobile version