Site icon PowerTV

ಕೆ.ಎಲ್.ರಾಹುಲ್​ಗೆ 31ನೇ ಶ್ರೇಯಾಂಕ ನೀಡಿದ ಐಸಿಸಿ

ನವದೆಹಲಿ: ಎರಡು ವರ್ಷಗಳ ಕಾಲ ಟೆಸ್ಟ್‌ ಕ್ರಿಕೆಟ್‌ನಿಂದ ದೂರ ಉಳಿದು, ಕಳೆದ ಇಂಗ್ಲೆಂಡ್‌ ಪ್ರವಾಸದಲ್ಲಿ ಎಂದಿನ ಓಪನರ್‌ಗಳ ಗಾಯದ ಸಮಸ್ಯೆ ಕಾರಣ ಭಾರತ ತಂಡದಲ್ಲಿ ಮರಳಿ ಸ್ಥಾನ ಪಡೆದಿದ್ದ ಕೆಎಲ್‌ ರಾಹುಲ್‌ ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಂಡಿದ್ದಾರೆ.

ಅವರ ಈ ಸಾಧನೆಯ ಫಲವಾಗಿ ಐಸಿಸಿ ಇತ್ತೀಚೆಗೆ ಪ್ರಕಟ ಮಾಡಿರುವ ನೂತನ ಐಸಿಸಿ ಟೆಸ್ಟ್‌ ರ‍್ಯಾಂಕಿಂಗ್‌ ಪಟ್ಟಿಯ ಬ್ಯಾಟ್ಸ್‌ಮನ್‌ಗಳ ವಿಭಾಗದಲ್ಲಿ ಬರೋಬ್ಬರಿ 18 ಸ್ಥಾನ ಏರಿಕೆ ಕಂಡು, 31ನೇ ಶ್ರೇಯಾಂಕ ತಮ್ಮದಾಗಿಸಿಕೊಂಡಿದ್ದಾರೆ. ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಣ ಪ್ರಥಮ ಟೆಸ್ಟ್‌ ಮತ್ತು ನ್ಯೂಜಿಲೆಂಡ್‌ ಮತ್ತು ಬಾಂಗ್ಲಾದೇಶ ನಡುವಣ ಮೊದಲ ಟೆಸ್ಟ್‌ ಬಳಿಕ ಐಸಿಸಿ ನೂತನ ರ‍್ಯಾಂಕಿಂಗ್‌ ಪಟ್ಟಿ ಬಿಡುಗಡೆ ಮಾಡಿದೆ.

Exit mobile version