Site icon PowerTV

ಪ್ರಿಯಕರ ಸುಮಂತ್ ಜೊತೆ ಸಪ್ತಪದಿ ತುಳಿದ ಬಿಗ್ ಬಾಸ್ ಖ್ಯಾತಿಯ ಶುಭ ಪೂಂಜಾ

ಬೆಂಗಳೂರು : ನಟಿ ಶುಭ ಪೂಂಜಾ ದೀರ್ಘಕಾಲದ ಗೆಳೆಯ ಸುಮಂತ್ ಜೊತೆ ಮದುವೆಯಾಗಿದ್ದಾರೆ. ಸುಮಂತ್ ಹಾಗೂ ಶುಭಾ ಮಂಗಳೂರಿನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಸಿಂಪಲ್ ಆಗಿ ಮ್ಯಾರೇಜ್ ಮಾಡಿಕೊಂಡಿದ್ದಾರೆ.

ಮಂಗಳೂರು ಮಜಲಬೆಟ್ಟುಬೀಡುವಿನಲ್ಲಿ ಕುಟುಂಬದವರು ಹಾಗು ಕೇವಲ ಕೆಲವು ಆಪ್ತರ ಸಮ್ಮುಖದಲ್ಲಿ ಸರಳವಾಗಿ ಮದುವೆ ಕಾರ್ಯಕ್ರಮ ನಡೆಯಿತು. ಸ್ಯಾಂಡಲ್​ವುಡ್​ ನಟಿ ಶುಭಾ ಪೂಂಜ ಸದ್ದಿಲ್ಲದೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಹಿಂದೆಯೇ ನಟಿ ಶುಭ ಪೂಂಜ ಮದುವೆಯಾಗಬೇಕಿತ್ತು. ಆದರೆ ಕೊರೋನಾ ಕಾರಣದಿಂದ ವಿವಾಹವನ್ನು ಮುಂದೂಡಲಾಗಿತ್ತು.

2004ರಲ್ಲಿ ಮಚ್ಚಿ ತಮಿಳು ಸಿನೆಮಾ ಮೂಲಕ ಚಿತ್ರರಂಗಕ್ಕೆ ಬಂದ ಶುಭ ಪೂಂಜಾ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಸ್ಧಾನ ಹೊಂದಿದ್ದಾರೆ.ಅವರು ಅಭಿನಯಿಸಿರುವ ಸಿನೆಮಾಗಳು ದೊಡ್ಡ ಮಟ್ಟಿಗೆ ಹಿಟ್ಟ್ ಆಗದಿದ್ದರೂ , ಅಭಿನಯ ಹಾಗೂ ಕೆಲವೊಂದು ಚಿತ್ರಕಥೆಗಳಲ್ಲಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.

Exit mobile version