Site icon PowerTV

ಸಚಿವ ಸಂಸದ ಜಟಾಪಟಿಗೆ FIR ದಾಖಲು

ರಾಮನಗರ : ಸಿಎಂ ಕಾರ್ಯಕ್ರಮದಲ್ಲಿ ಡಿಕೆ ಸುರೇಶ್-ಸಚಿವ ಅಶ್ವಥ್ ನಾರಾಯಣ್ ಜಟಾಪಟಿ ವಿಚಾರಕ್ಕೆ ಸಂಬಂಧಿಸಿದಂತೆ ರಾಮನಗರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ರಾಂಪುರ ನಾಗೇಶ್, ಕೋಟೆ ಕುಮಾರ್, ಗುಡ್ಡೆ ವೆಂಕಟೇಶ್, ಗೌಸ್ ಪಾಷಾ, ಗೋವಿಂದಯ್ಯ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಇವರು ಪೂರ್ವ ಯೋಜಿತರಾಗಿ ಕಾರ್ಯಕ್ರಮದ ಸ್ಥಳಕ್ಕೆ ಬಂದಿದರು. ಸಂಸದರಿಂದ ಅಂಬೇಡ್ಕರ್ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿಸಲಿಲ್ಲ ಅಂತಾ ಧಿಕ್ಕಾರ ಕೂಗೋಕೆ ಶುರು ಮಾಡಿದರು. ಜಿಲ್ಲಾಡಳಿತ ಹಾಗು ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಧಿಕ್ಕಾರ ಕೂಗಿ ಕಪ್ಪು ಬಟ್ಟೆ ಪ್ರದರ್ಶನ ಮಾಡೋಕೆ ಶುರು ಮಾಡಿದರು. ಕಾರ್ಯಕ್ರಮ ಪ್ರಾರಂಭವಾದಾಗ ವೇದಿಕೆಯ ಮೇಲ್ಭಾಗಕ್ಕೆ ನುಗ್ಗಲು ಯತ್ನಿಸಿದ್ರು.

ಸರ್ಕಾರಿ ಕಾರ್ಯಕ್ರಮ ನಡೆಯಲು ಬಿಡುವುದಿಲ್ಲ ಅಂತಾ ಪೂರ್ವ ಯೋಜಿತವಾಗಿ ಸಂಘಟನೆ ಮಾಡಿಕೊಂಡು ಬಂದಿದರು. ವೈಯಕ್ತಿಕ ಹಿತಾಸಕ್ತಿಯಿಂದ ಧಿಕ್ಕಾರ ಕೂಗಿ ಕಪ್ಪು ಬಾವುಟ ಪ್ರದರ್ಶನ ಅಂತಾ ಎಫ್ಐಆರ್​​ನಲ್ಲಿ ಉಲ್ಲೇಖಿಸಲಾಗಿದೆ.

Exit mobile version