Site icon PowerTV

ಒಮೈಕ್ರಾನ್​ಗೆ ಭಾರತದಲ್ಲಿ ಮೊದಲ ಬಲಿ

ಉದಯಪುರ:  ಭಾರತವು ಇಂದು ರಾಜಾಸ್ಥಾನ ರಾಜ್ಯದ ಉದಯಪುರದಲ್ಲಿ ತನ್ನ ಮೊದಲ ಒಮೈಕ್ರಾನ್ ಸಾವನ್ನು ವರದಿ ಮಾಡಿದೆ ಎಂದು ಸರ್ಕಾರಿ ಮೂಲಗಳು ದೃಢಪಡಿಸಿವೆ. ಲಕ್ಷ್ಮೀನಾರಾಯಣನಗರದ 73 ವರ್ಷದ ವ್ಯಕ್ತಿ ಒಮೈಕ್ರಾನ್​​ನಿಂದ ಮೃತಪಟ್ಟಿದ್ದಾರೆ. ಅವರು ಡಿಸೆಂಬರ್ 15 ರಂದು ಕೋವಿಡ್‌ ಪರೀಕ್ಷೆ ನಡೆಸಿದ್ದರು.

ಮಧುಮೇಹ, ಅಧಿಕ ರಕ್ತದೊತ್ತಡ ಮುಂತಾದ ಕೊಮೊರ್ಬಿಡಿಟಿಗಳು ಅವರಿಗಿತ್ತು ಎಂದು ವರದಿಯಾಗಿದೆ. ಅವರ ಮಾದರಿಗಳನ್ನು ಜೀನೋಮ್ ಸೀಕ್ವೆನ್ಸಿಂಗ್‌ಗಾಗಿ ಕಳುಹಿಸಲಾಗಿತ್ತು. ಏತನ್ಮಧ್ಯೆ ಡಿಸೆಂಬರ್ 21 ರಂದು ಅವರಿಗೆ ಕೋವಿಡ್ ನೆಗೆಟಿವ್ ಕಂಡುಬಂದಿದೆ. ಜೀನೋಮ್ ಸೀಕ್ವೆನ್ಸಿಂಗ್ ಫಲಿತಾಂಶಗಳು ಡಿಸೆಂಬರ್ 25ರಂದು ಬಂದವು ಮತ್ತು ಅವರು ಒಮೈಕ್ರಾನ್ ರೂಪಾಂತರವನ್ನು ಹೊಂದಿದ್ದಾರೆಂದು ಕಂಡುಬಂದಿದೆ.

 

Exit mobile version