Site icon PowerTV

ಕೊರೋನ ಕರ್ಫ್ಯೂ ಅಲ್ಲ, ಬಿಜೆಪಿ ಕರ್ಫ್ಯೂ- ಡಿ.ಕೆ. ಸುರೇಶ್

ಕನಕಗಿರಿ: ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ಪಾದಯಾತ್ರೆ ಹಿನ್ನಲೆ ಸಂಸದ ಡಿಕೆ ಸುರೇಶ್ ಹೇಳಿಕೆ ನೀಡಿದ್ದು, ಇದು ಕರೋನ ಕರ್ಪ್ಯೂ ಅಲ್ಲ ಬಿಜೆಪಿ ಕರ್ಪ್ಯೂ ಎಂದು ಕಿಡಿಕಾರಿದ್ದಾರೆ. ಕನಕಗಿರಿಯಲ್ಲಿ ಮಾತನಾಡಿದ ಅವರು, ನಾವು ನೀರಿಗಾಗಿ ನಡಿಗೆ ಮಾಡ್ತಾ ಇದ್ದೀವಿ. ನಮ್ಮ ಪಾದಯಾತ್ರೆಯನ್ನು ಹತ್ತಿಕ್ಕುವ ಕೆಲಸ ಬಿಜೆಪಿ ಮಾಡ್ತಿದೆ ಎಂದು ಕಿಡಿಕಾರಿದ್ದಾರೆ.
ರಾಜ್ಯದಲ್ಲಿ ರಾತ್ರೋ ರಾತ್ರಿ ಬಿಜೆಪಿ ಕರೋನ ಜಾಸ್ತಿಯಾಗಿದೆ. ಹೇಗೆ ಜಾಸ್ತಿ ಆಯ್ತು ಅಂತಾ ಗೊತ್ತಿಲ್ಲ. ಈ ದೇಶದಲ್ಲಿ ರಾಜ್ಯದಲ್ಲಿ ಅನೇಕ ಕಾರ್ಯಕ್ರಮಗಳು ನಡೀತಿವೆ. ಆಗ ಕಾಣದೇ ಇರುವ ಕರೋನ . ಇದೀಗ ಮೇಕೆದಾಟು ನಡಿಗೆ ಮಾಡಬೇಕಾದ್ರೆ ಕರೋನ ಕಾಣ್ತಿದೆ. ಇದು ರಾಜ್ಯದ ಜನರಿಗೆ ಮಾಡುತ್ತಿರುವ ಹೋರಾಟ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈ ಮೇಕೆದಾಟು ಯೋಜನೆ ಅನುಷ್ಠಾನ ತರಬೇಕು. ಆ ನಿಟ್ಟಿನಲ್ಲಿ ನಾವು ಮೇಕೆದಾಟು ನಡಿಗೆ ಮಾಡ್ತಿದ್ದೇವೆ ಎಂದು ಹೇಳಿದರು.

Exit mobile version