Site icon PowerTV

ಪಾದಯಾತ್ರೆ ಮಾಡಿಯೇ ಸಿದ್ಧ : ಮಾಜಿ ಸಿಎಂ ಸಿದ್ದರಾಮಯ್ಯ

ಬೆಂಗಳೂರು : ನಾವು ಪಾದಯಾತ್ರೆ ಮಾಡಿಯೇ ಮಾಡ್ತೇವೆ. ಯಾವುದೇ ಕಾರಣಕ್ಕೂ ಪಾದಯಾತ್ರೆ ನಿಲ್ಲಿಸಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಯನ್ನ ನೀಡಿದ್ದಾರೆ.

ಕೊರೊನಾ ಟಫ್ ರೂಲ್ಸ್ ಜಾರಿ ವಿಚಾರವಾಗಿ ಮಾತನಾಡಿದ ಅವರು, ನಾವು ಜನರನ್ನ ಉಳಿಸುವ ಕೆಲಸವನ್ನೂ ಮಾಡ್ತೇವೆ. ಪಾದಯಾತ್ರೆಯಿಂದ ಯಾರಿಗೂ ತೊಂದರೆಯಾಗಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಬಳಿಕ, ಪಾದಯಾತ್ರೆ ನಿಲ್ಲಿಸಲು ಟಫ್ ರೂಲ್ಸ್ ತಂದ್ರಾ ಎಂಬ ಪ್ರಶ್ನೆಗೆ , ಅದೆಲ್ಲ ನನಗೆ ಗೊತ್ತಿಲ್ಲ. ಆದರೆ ಪಾದಯಾತ್ರೆ ಮಾಡಿಯೇ ಮಾಡ್ತೇವೆ ಎಂದು ಉತ್ತರ ಕೊಟ್ಟರು.

Exit mobile version