Site icon PowerTV

ʻಏಕ್‌ ಲವ್‌ ಯಾʼ ಬಿಡುಗಡೆ ಮುಂದಕ್ಕೆ!

ರಕ್ಷಿತಾಸ್‌ ಫಿಲ್ಮ್‌ ಫ್ಯಾಕ್ಟರಿ ಲಾಂಛನದಲ್ಲಿ, ಶೋಮ್ಯಾನ್‌ ಪ್ರೇಮ್ ನಿರ್ದೇಶಿಸಿರುವ ಸಿನಿಮಾ ʻಏಕ್‌ ಲವ್‌ ಯಾʼ. ಈ ಚಿತ್ರದೊಂದಿಗೆ ನಟಿ ರಕ್ಷಿತಾ ಅವರ ಸಹೋದರ ರಾಣಾ ನಾಯಕನಟನಾಗಿ ಚಿತ್ರರಂಗಕ್ಕೆ ಪರಿಚಯಗೊಳ್ಳುತ್ತಿದ್ದಾರೆ. ರಚಿತಾ ರಾಮ್‌, ರೀಷ್ಮಾ ನಾಣಯ್ಯ ನಾಯಕಿಯರಾಗಿ ನಟಿಸಿದ್ದಾರೆ. ಅರ್ಜುನ್‌ ಜನ್ಯಾ ಸಂಗೀತ ನಿರ್ದೇಶನ, ಮಹೇನ್‌ ಸಿಂಹ ಛಾಯಾಗ್ರಹಣದ ʻಏಕ್‌ ಲವ್‌ ಯಾʼ ಇದೇ ಜನವರಿ ತಿಂಗಳ 21ರಂದು ತೆರೆಗೆ ಬರಬೇಕಿತ್ತು. ಸದ್ಯ ಕೋವಿಡ್‌ ಪ್ರಕರಣಗಳು ಹೆಚ್ಚಾಗಿ, ವಾರಾಂತ್ಯದ ಲಾಕ್‌ ಡೌನ್‌ ಇತ್ಯಾದಿ ಸಮಸ್ಯೆಗಳಿಂದ ಚಿತ್ರದ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ.

ಕೋವಿಡ್‌ ಮಾರ್ಗಸೂಚಿ ಬದಲಾದ ನಂತರ ಏಕ್‌ ಲವ್‌ ಯಾ ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಿಸಲಾಗುವುದು. ಏಕ್‌ ಲವ್‌ ಯಾ ಸಿನಿಮಾವನ್ನು ವೀಕ್ಷಿಸಲು ಪ್ರೇಕ್ಷಕರು ಕಾತರರಾಗಿದ್ದಾರೆ. ಆದರೆ ಸದ್ಯದ ಸಂದರ್ಭವನ್ನು ಅರಿತು ಬಿಡುಗಡೆಯನ್ನು ಮುಂದೂಡಲಾಗಿದೆ. ಚಿತ್ರದ ಕುರಿತು ಸಾಕಷ್ಟು ಕುತೂಹಲಕರ ಅಂಶಗಳಿದ್ದು, ಸಿನಿಮಾ ಬಿಡುಗಡೆಯ ತನಕ ಅವೆಲ್ಲವನ್ನೂ ಅನಾವರಣಗೊಳಿಸಲಾಗುವುದು.

ಸದ್ಯ ಬಿಡುಗಡೆಯಾಗಿರುವ ಏಕ್‌ ಲವ್‌ ಯಾ ಸಿನಿಮಾದ ಹಾಡುಗಳು ಹೊಸ ಟ್ರೆಂಡ್‌ ಸೆಟ್‌ ಮಾಡಿವೆ. ಎಲ್ಲರನ್ನೂ ರಂಜಿಸುವುದರ ಜೊತೆಗೆ ಯೂ ಟ್ಯೂಬ್‌ ನಲ್ಲಿ ಅಪಾರ ವೀಕ್ಷಣೆಯನ್ನು ಪಡೆಯುತ್ತಾ ಸಾಗುತ್ತಿದೆ.

Exit mobile version