Site icon PowerTV

ಚಿಕ್ಕಬಳ್ಳಾಪುರದಲ್ಲಿ ಮತ್ತೆ ಭೂಕಂಪ

ಚಿಕ್ಕಬಳ್ಳಾಪುರ : ಶೆಟ್ಟಿಗೆರೆ, ಬಂಡಹಳ್ಳಿ, ಪೇರೇಸಂದ್ರ, ಬಿಸೈಗಾರಪಲ್ಲಿ, ಪಿಲ್ಲಗುಂಡ್ಲಹಳ್ಳಿ ಸೇರಿ ಹಲವು ಗ್ರಾಮಗಳಲ್ಲಿ ರಾತ್ರಿ ಭೂಮಿಯು ಕಂಪಿಸಿದ ಅನುಭವ ಉಂಟಾಗಿದೆ.

ಕಳೆದ ರಾತ್ರಿ 03 ಗಂಟೆ ಸುಮಾರಿಗೆ 3-4 ಸೆಕೆಂಡ್ ಗಳ ಕಾಲ ಭೂಮಿ ಕಂಪಸಿದೆ. ಭೂಮಿಯ ಅಂತರಾಳದಿಂದ ಭಾರೀ ಸ್ಪೋಟದ ಶಬ್ದದ ನಂತರ ಕಂಪಿಸಿರುವ ಭೂಮಿ, ಜಿಲ್ಲೆಯಲ್ಲಿ 2 ಬಾರಿ ಭೂಮಿ ಕಂಪಿಸಿದ್ದು ಲಘು ಭೂಕಂಪವಾಗಿರುವ ಬಗ್ಗೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ಮಾನಿಟರಿಂಗ್ ಕೇಂದ್ರ (ಕೆ.ಎಸ್.ಎನ್.ಡಿ.ಎಂ.ಸಿ)  ಸ್ಪಷ್ಟ ಪಡಿಸಿತ್ತು.

ಭೂಕಂಪನದ ಅನುಭವಕ್ಕೆ ಬೆಚ್ಚಿಬಿದ್ದ ಜನ ಮುಂಜಾನೆ 03 ಗಂಟೆಯಿಂದ ಮನೆಗಳಿಂದ ಹೊರಗಡೆ ಬಂದಿದ್ದಾರೆ. ಭೂ ಕಂಪನವಾಗಿ ಮನೆಯಲ್ಲಿದ್ದ ಪಾತ್ರೆ, ಸಾಮಾನುಗಳು ಅದುರಿಬಿಟ್ಟಿವೆ.

Exit mobile version