Site icon PowerTV

ಓಮಿಕ್ರಾನ್ ಎಫೆಕ್ಟ್ : ಓಂ ಶಕ್ತಿಗೆ ತೆರಳಿದ್ದ ಭಕ್ತರು ವಾಪಸ್

ಶಿವಮೊಗ್ಗ : ಕೋವಿಡ್ ಹೆಚ್ಚಾಗುವ ಭೀತಿ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮವನ್ನು  ಕೈಗೊಂಡಿದೆ.  ಒಟ್ಟು 82 ಬಸ್ಸಿನಲ್ಲಿ 4 ಸಾವಿರಕ್ಕೂ ಅಧಿಕ ಭಕ್ತರು ಓಂ ಶಕ್ತಿಗೆ ತೆರಳಿದ್ದಾರೆ.

ಡಿ. 31 ರಂದು ತೆರಳಿದ್ದ ಭಕ್ತರು ಇಂದು ವಾಪಸ್ ಆಗಿದ್ದಾರೆ.ಓಂ ಶಕ್ತಿಯಿಂದ ವಾಪಸ್ಸಾದ ಭಕ್ತರನ್ನು ಜಿಲ್ಲಾಡಳಿತ, ಕೋವಿಡ್ ತಪಾಸಣೆಗೆ ಒಳಪಡಿಸಿದೆ.ನಗರದ ಸಹ್ಯಾದ್ರಿ ಕಾಲೇಜಿನ ಕ್ರೀಡಾಂಗಣದಲ್ಲಿ ಕೋವಿಡ್ ತಪಾಸಣೆಯನ್ನು ಮಾಡಲಾಗಿದೆ.ಪ್ರತಿಯೊಬ್ಬರಿಗೂ ಸ್ಕ್ರೀನಿಂಗ್  ಆರೋಗ್ಯ ಸಿಬ್ಬಂದಿ ಟೆಸ್ಟ್ ನಡೆಸುತ್ತಿದ್ದಾರೆ.

ಸ್ಕ್ರೀನಿಂಗ್ ಹಾಗೂ ರ್ಯಾಪಿಡ್ ಟೆಸ್ಟ್ ನಲ್ಲಿ ಪಾಸಿಟಿವ್ ಪತ್ತೆಯಾದರೆ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗುತ್ತದೆ.ನೆಗೆಟಿವ್ ಬಂದವರಿಗೆ ಆರೋಗ್ಯ ಇಲಾಖೆ ಹೋಂ ಕ್ವಾರಂಟೈನ್ ಗೆ ಒಳಪಡಿಸಲಾಗಿದೆ.

Exit mobile version