Site icon PowerTV

ಬಳ್ಳಾರಿಯಲ್ಲಿ ಪಸರಿಸುತ್ತಿದೆ ಮಹಾಮಾರಿ ಕೊರೋನಾ

ಬಳ್ಳಾರಿ: ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಒಂದೇ ದಿನ ಜಿಲ್ಲೆಯಲ್ಲಿ 9 ಜನರಿಗೆ ಸೋಂಕು ಕಂಡುಬಂದಿದೆ.

ಬಳ್ಳಾರಿ 5 ಹಾಗೂ ಸಂಡೂರ್ ನಲ್ಲಿ 4 ಜನರಿಗೆ ಸೋಂಕು ಪತ್ತೆಯಾಗಿದೆ, ಬಳ್ಳಾರಿ ಜಿಲ್ಲೆ ಮತ್ತು ಸಂಡೂರ್ ನಲ್ಲಿ ನಿಧಾನವಾಗಿ ಸೋಂಕು ಏರಿಕೆಯಾಗುತ್ತಲೇ ಇದೆ. ಕಳೆದ ಒಂದು ವಾರದ ಅವಧಿಯಲ್ಲಿ ಸಂಡೂರ್ ನಲ್ಲಿ 25 ಜನರಿಗೆ ಕೊರೊನಾ ಸೋಂಕು ಕಂಡುಬಂದಿದೆ.

ವಿಜಯನಗರ ಅವಳಿ ಜಿಲ್ಲೆಯಲ್ಲಿ 141 ಆ್ಯಕ್ಟೀವ್ ಕೇಸ್ ಪತ್ತೆಯಾಗಿದೆ. ನಿಧಾನವಾಗಿ ಕೋವಿಡ್ ಏರಿಕೆಯಾಗುತ್ತಿರುವ ಹಿನ್ನಲೆಯಲ್ಲಿ ಇಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ನೇತೃತ್ವದಲ್ಲಿ ಮುಂಜಾಗೃತಾ ಸಭೆಯನ್ನು ಕರೆಯಲಾಗಿದೆ.

Exit mobile version