Site icon PowerTV

ಬಾಹುಬಲಿ ಪ್ರಭಾಸ್ ಫ್ಯಾನ್ಸ್ ಗೆ ಬ್ಯಾಡ್ ನ್ಯೂಸ್

ಬೆಂಗಳೂರು : ಕೊರೋನಾ ಕೇಸ್ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದ್ದರಿಂದ RRR ಸಿನೆಮಾ ತಂಡ ತಮ್ಮ ಚಿತ್ರದ ಬಿಡುಗಡೆಯನ್ನು ಮುಂದಕ್ಕೆ ಹಾಕಿದೆ.ಬಹುನಿರೀಕ್ಷಿತ RRR ಸಿನೆಮಾ ರಿಲೀಸ್ ಡೇಟ್ ಪೋಸ್ಟ್ ಪೋನ್ ಆಗಿದೆ. ಎಲ್ಲ ಅಂದುಕೊಂಡಂತೆ ಆಗಿದ್ದರೆ, ಜನವರಿ 7ರಂದು ಬಿಡುಗಡೆ ಆಗಬೇಕಿತ್ತು. ಆದರೆ ಹೆಚ್ಚುತ್ತಿರುವ ಕೊರೋನಾ ಪ್ರಕರಣ ಮತ್ತು ಹೊಸ ಮಾರ್ಗಸೂಚಿಗಳಿಂದಾಗಿ ಸಿನೆಮಾ ಬಿಡುಗಡೆಯನ್ನು ಚಿತ್ರತಂಡ ಮುಂದೂಡಿದೆ.

ಪ್ರಭಾಸ್ ಮತ್ತು ಪೂಜ ಹೆಗಡೆ ನಟನೆಯ ರಾಧೆ ಶಾಮ್ ದೊಡ್ಡ ಬಜೆಟ್​ನ ಸಿನೆಮಾ ಆಗಿದ್ದು. ಈ ಸಿನೆಮಾವು ಕನ್ನಡ, ತೆಲುಗು,ತಮಿಳು,ಮಲಯಾಳಂ,ಹಿಂದಿ ಭಾಷೆಯಲ್ಲಿ ಈ ಸಿನೆಮಾ ರಿಲೀಸ್ ಆಗಲಿದೆ. ಯುವಿ ಕ್ರಿಯೇಷನ್ಸ್ ಬ್ಯಾನರ್ ನಡಿ ತಯಾರಾದ ಪ್ಯಾನ್ ಇಂಡಿಯಾ ಚಿತ್ರ ಇದಾಗಿದ್ದು , ಸಂಕ್ರಾಂತಿಗೆ ಜ.14ರಂದು ತೆರೆ ಕಾಣಬೇಕಿದ್ದ ಈ ಚಿತ್ರವು ಕೊರೋನಾ ಮೂರನೇ ಅಲೆ ಶುರುವಾದ ಹಿನ್ನೆಲೆಯಲ್ಲಿ ಸಿನೆಮಾ ರಿಲೀಸ್ ಮುಂದೂಡಲಾಗಿದೆ.

Exit mobile version