Site icon PowerTV

ಅಪ್ಪು ಕಥೆಯ ಯುವರಾಜ್ ಕುಮಾರ್ ನಟನೆಯ ಚಿತ್ರದ ಶೀರ್ಷಿಕೆ ಫಿಕ್ಸ್​

ಸಿನಿಮಾ : ನಟ ಪುನೀತ್ ರಾಜ್​​ಕುಮಾರ್ ಅಗಲಿಕೆಯಿಂದಾಗಿ ಅವರು ನಟಿಸಬೇಕಿದ್ದ ಹಲವು ಸಿನಿಮಾಗಳ ಮುಂದಿನ ಕಥೆ ಏನು ಅನ್ನೋ ಪ್ರಶ್ನೆ ಚಿತ್ರರಂಗ ಹಾಗೂ ಅಭಿಮಾನಿಗಳನ್ನು ಕಾಡುತ್ತಿತ್ತು.

ಅದರಲ್ಲೂ ಸಂತೋಷ್ ಆನಂದ್ ರಾಮ್ ರಾಜಕುಮಾರ, ಯುವರತ್ನ ಸಿನಿಮಾಗಳ ನಂತರ ಅಪ್ಪು ಅವರೊಂದಿಗೆ ಮತ್ತೊಂದು ಚಿತ್ರವನ್ನು ಮಾಡಲು ಮುಂದಾಗಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ ,ಪುನೀತ್ ರಾಜ್​​ಕುಮಾರ್ ನಟಿಸಬೇಕಿದ್ದ ಆ ಸಿನಿಮಾ ಇದೀಗ ಯುವರಾಜ್​​ಕುಮಾರ್ ಅವರ ಪಾಲಾಗಿದೆ.

ಅಪ್ಪು ಅವರ ಸಿನಿಮಾದಲ್ಲಿ ಯುವರಾಜ್​​ಕುಮಾರ್ ನಟಿಸೋ ವಿಷಯ ಈಗಾಗ್ಲೇ ಸಾಕಷ್ಟು ಸುದ್ದಿಯಾಗಿತ್ತು. ಇದೀಗ ಆ ಚಿತ್ರಕ್ಕೆ ಟೈಟಲ್ ಕೂಡ ಫಿಕ್ಸ್ ಆಗಿದೆ. ಸಂತೋಷ್ ಆನಂದ್ ರಾಮ್ ಹಾಗೂ ಯುವರಾಜ್​​ಕುಮಾರ್ ಕಾಂಬಿನೇಶನ್ ಚಿತ್ರಕ್ಕೆ “ರಾಜಧಾನಿ ಹೈಕ್ಳು” ಅನ್ನೋ ಟೈಟಲ್ ಇಡೋದು ಬಹುತೇಕ ಖಚಿತವಾಗಿದೆ. ಈ ಬಗ್ಗೆ ಚಿತ್ರತಂಡದಿಂದ ಇನ್ನಷ್ಟೇ ಅಧಿಕೃತ ಮಾಹಿತಿ ಹೊರಬೀಳಬೇಕಾಗಿದೆ.

Exit mobile version