Site icon PowerTV

ಆಘಾತಕಾರಿ ಮಾಹಿತಿ ಹೊರಹಾಕಿದ ಆರೋಗ್ಯ ಸಚಿವ ಡಾ ಕೆ ಸುಧಾಕರ್

ರಾಜ್ಯ : ರಾಜ್ಯದಲ್ಲಿ ದಿನೇದಿನೇ ಒಮೈಕ್ರಾನ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ನಿನ್ನೆಯ ಹೊತ್ತಿಗೆ 1200 ಕೋವಿಡ್-19 ಪ್ರಕರಣಗಳು ಪತ್ತೆಯಾಗಿದೆ ಎಂದು ಆರೋಗ್ಯ ಸಚಿವ ಡಾ ಕೆ ಸುಧಾಕರ್ ಆಘಾತಕಾರಿ ಮಾಹಿತಿ ಹೊರಹಾಕಿದ್ದಾರೆ.

ಕಳೆದ ಎರಡು ವರ್ಷಗಳಲ್ಲಿ ಜನತೆ ಲಾಕ್ ಡೌನ್ ನಿಂದ ಹೈರಾಣಾಗಿ ಹೋಗಿದ್ದಾರೆ. ಈಗ ತಾನೇ ಸಹಜ ಸ್ಥಿತಿಗೆ ಬರುತ್ತಿದೆ ಎನ್ನುವಾಗಲೇ ಲಾಕ್ ಡೌನ್ ನಂತಹ ಕಠಿಣ ಪದ ಬಳಸಿ ಜನರಲ್ಲಿ ಮತ್ತಷ್ಟು ಆತಂಕವನ್ನುಂಟುಮಾಡುವುದು ಬೇಡ.

ಲಾಕ್ ಡೌನ್ ಮಾಡದೆ ಪರ್ಯಾಯ ಕ್ರಮಗಳಿಂದ ಕೊರೋನಾ ನಿಯಂತ್ರಣ ಹೇಗೆ ಮಾಡಬಹುದು ಎಂಬ ಮಾರ್ಗ ಹುಡುಕುತ್ತೇವೆ. ಜನರಿಗೆ ಸಮಸ್ಯೆ ಕೂಡ ಆಗಬಾರದು ಎಂದರು. ಬೆಂಗಳೂರು ನಗರದಲ್ಲಿ ತಕ್ಷಣಕ್ಕೆ ಕಠಿಣ ಕ್ರಮ ತೆಗೆದುಕೊಳ್ಳುವುದು ಅನಿವಾರ್ಯ ಎಂದು ಮುಂದಿನ ದಿನಗಳಲ್ಲಿ ಕಠಿಣ ನಿಯಮ ಜಾರಿ ತರುವ ಸುಳಿವನ್ನು ಸಹ ಆರೋಗ್ಯ ಸಚಿವರು ನೀಡಿದರು.

Exit mobile version