Site icon PowerTV

ಬಿಗ್​​ ಆಫರ್​ ತಿರಸ್ಕರಿಸಿದ ರಾಧೆ ಶ್ಯಾಮ್​​

ಓಟಿಟಿ ದೈತ್ಯರಾದ ನೆಟ್​​ಫ್ಲಿಕ್ಸ್ ಹಾಗೂ ಅಮೆಜಾನ್ ಪ್ರೈಮ್ ವಿಡಿಯೋಗಳು ‘ರಾಧೆ ಶ್ಯಾಮ್’ ಸಿನಿಮಾದ ಹಕ್ಕುಗಳನ್ನು ಪಡೆಯಲು ಬಹುದೊಡ್ಡ ಮೊತ್ತವನ್ನು ಆಫರ್ ಮಾಡಿವೆ.

ಕೊವಿಡ್​​ ಕಾರಣದಿಂದ ಚಿತ್ರದ ಬಿಡುಗಡೆ ಅನುಮಾನವಿರುವುದರಿಂದ ನೇರವಾಗಿ ಓಟಿಟಿಯಲ್ಲಿ ತೆರೆಕಾಣಿಸುವ ಒಪ್ಪಂದವನ್ನು ಅವು ಮುಂದಿಟ್ಟಿವೆ. ನೆಟ್​​​ಫ್ಲಿಕ್ಸ್ ಇದಕ್ಕಾಗಿ ಬರೋಬ್ಬರಿ ₹ 300 ಕೋಟಿ ಆಫರ್ ಮಾಡಿತ್ತಂತೆ. ಅಮೆಜಾನ್ ಪ್ರೈಮ್ ವಿಡಿಯೋ ಇದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ ₹ 350 ಕೋಟಿ ಆಫರ್ ನೀಡಿದೆಯಂತೆ.

ಆದ್ರೆ, ಕಂಪನಿಗಳು ನೀಡಿದ ನೇರವಾಗಿ ಓಟಿಟಿ ಬಿಡುಗಡೆ ಆಫರ್​ಅನ್ನು ನಯವಾಗಿಯೇ ಚಿತ್ರತಂಡ ತಿರಸ್ಕರಿಸಿದೆ. ಇಂತಹ ಚಿತ್ರಗಳು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದರೇ ಚೆನ್ನ. ಆದ್ದರಿಂದ ನೇರವಾಗಿ ಓಟಿಟಿಯಲ್ಲಿ ತೆರೆಕಾಣಿಸುವ ಯಾವುದೇ ಯೋಜನೆಗಳಿಲ್ಲ ಎಂದಿದೆ ಚಿತ್ರತಂಡ.

ಇದು ಪ್ರಭಾಸ್ ಅಭಿಮಾನಿಗಳೂ ಸೇರಿ ಚಿತ್ರ ಪ್ರೇಮಿಗಳಿಗೆ ಸಮಾಧಾನ ತಂದಿದೆ. ಆದರೆ ಚಿತ್ರ ಬಿಡುಗಡೆಯ ಕುರಿತು ಅನಿಶ್ಚಿತತೆ ಇದ್ದು, ದಿನಾಂಕ ಮುಂದೂಡುವ ಸಾಧ್ಯತೆ ದಟ್ಟವಾಗಿದೆ.

Exit mobile version