Site icon PowerTV

ಬೆಳಗಾವಿಯನ್ನು ಆವರಿಸುತ್ತಿದೆ ಮಹಾಮಾರಿ ಒಮಿಕ್ರಾನ್

ಬೆಳಗಾವಿ : ಮಹಾರಾಷ್ಟ್ರದಲ್ಲಿ ಹೆಚ್ಚುತ್ತಿರುವ ಒಮಿಕ್ರಾನ್ ಮತ್ತು ಕೋವಿಡ್ ಕೇಸ್​ನಿಂದಾಗಿ ಗಡಿ ಜಿಲ್ಲೆಯ ಬೆಳಗಾವಿಯಲ್ಲಿ ಹೈಅಲರ್ಟ್ ಘೋಷಿಸಲಾಗಿದೆ.

ಬೆಳಗಾವಿ, ನಿಪ್ಪಾಣಿ, ಕಾಗವಾಡ,ಅಥಣಿ ತಾಲೂಕಿನ ಗಡಿಯಲ್ಲಿ ಬೀಗಿಯಾದ ಚೆಕ್ ಪೋಸ್ಟ್ ಅದೇರೀತಿ ಬಾಚಿ, ಕುಗನ್ನೊಳ್ಳಿ ಸೇರಿ 23 ಕಡೆ ಚೆಕ್ ಪೋಸ್ಟ್ ಗಳಲ್ಲಿ ಹೈಲರ್ಟ್ ನೀಡಿದ್ದಾರೆ. ಮಹಾರಾಷ್ಟ್ರದಿಂದ ಬರುವ ವಾಹನಗಳನ್ನು ತಪಾಸಣೆ ಮಾಡಲಾಗಿದೆ.

ಎರಡು ಡೋಸ್ ವ್ಯಾಕ್ಸಿನ್ ಇಲ್ಲಾ ಕೋವಿಡ್ ನೆಗಟಿವ್ ರಿಪೋರ್ಟ್ ತಪಾಸಣೆ ಕಡ್ಡಾಯಗೊಳಿಸಿದ್ದಾರೆ. ಹಾಗೆನೇ ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ ಮತ್ತು ಕಂದಾಯ ಇಲಾಖೆ ಸಿಬ್ಬಂದಿಯಿಂದ ತಪಾಸಣೆಯನ್ನು ಮಾಡಲಾಗಿದೆ.

Exit mobile version