Site icon PowerTV

ಸೇನಾ ಹೆಲಿಕಾಪ್ಟರ್​​​​​​​ ಪತನ

ಇಸ್ರೇಲ್ : ಸೇನಾ ಹೆಲಿಕಾಪ್ಟರ್ ಸೋಮವಾರ ತಡರಾತ್ರಿ ತರಬೇತಿ ಹಾರಾಟದ ವೇಳೆ ಉತ್ತರ ಇಸ್ರೇಲ್ ಕರಾವಳಿಯಲ್ಲಿ ಪತನಗೊಂಡಿದೆ, ದುರಂತದಲ್ಲಿ ಇಬ್ಬರು ಪೈಲಟ್‌ಗಳು ಸಾವನ್ನಪ್ಪಿದ್ದಾರೆ ಎಂದು ಮಿಲಿಟರಿ ಅಧಿಕಾರಿಗಳು ತಿಳಿಸಿದ್ದಾರೆ.

ಹೆಲಿಕಾಪ್ಟರ್ ಪತನದ ವೇಳೆ ವೈಮಾನಿಕ ವೀಕ್ಷಕ ಗಾಯಗೊಂಡಿದ್ದಾರೆ.ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವಾಯುಪಡೆಯ ಕಮಾಂಡಿಂಗ್ ಅಧಿಕಾರಿ ದುರಂತದ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ. ಅಲ್ಲದೆ ತರಬೇತಿ ವಿಮಾನಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ಸೂಚನೆ ನೀಡಿದ್ದಾರೆ.

Exit mobile version