Site icon PowerTV

ರಾಜ್ಯ ಯುವಜನೋತ್ಸವ ಉದ್ಘಾಟಿಸಿದ ರಾಜ್ಯಪಾಲರಾದ : ಥಾವರ್ ಚಂದ್ ಗೆಹ್ಲೋಟ್‌

ಮಂಡ್ಯ : ಇಂದು ಮತ್ತು ನಾಳೆ ನಡೆಯಲಿರುವ ರಾಜ್ಯಮಟ್ಟದ ಯುವಜನೋತ್ಸವ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್‌ ಉದ್ಘಾಟಿಸಿದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ನಡೆದ ಈ ಕಾರ್ಯಕ್ರಮನ್ನು ದೀಪಬೆಳಗಿಸಿ, ಡೊಳ್ಳು ಬಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಗಾಯನ, ವಾದ್ಯ, ನೃತ್ಯ, ನಾಟಕ, ಆಶುಭಾಷಣ ಸೇರಿದಂತೆ 18ಕ್ಕೂ ಹೆಚ್ಚು ಸ್ಪರ್ಧೆಯನ್ನು ಆಯೋಜಿಸಲಾಯಿತು.

ಪ್ರತಿ ಜಿಲ್ಲೆಯಿಂದ 57 ಸ್ಪರ್ಧಿಗಳಂತೆ ರಾಜ್ಯದ ಎಲ್ಲಾ ಜಿಲ್ಲೆಗಳಿಂದ 2000 ಸ್ಪರ್ಧಾಳು ಭಾಗಿಯಾಗಿದ್ದರು. ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಸಚಿವ ಕೆ.ಸಿ.ನಾರಾಯಣ ಗೌಡ, ಸುನೀಲ್ ಕುಮಾರ್, ಶಾಸಕ ಸುರೇಶ್ ಗೌಡ, ಎಂ.ಶ್ರೀನಿವಾಸ್, ಡಿಸಿ ಅಶ್ವತಿ, ಸೇರಿದಂತೆ ಹಲವರು ಭಾಗಿಯಾಗಿದ್ದಾರೆ.

Exit mobile version