Site icon PowerTV

ಗೋವಾ ಗಡಿಯಲ್ಲಿ ಹೈ ಅಲರ್ಟ್​​​​​​

ಗೋವಾ : ಗೋವಾದಲ್ಲಿ ಕೊರೋನಾ ಪಾಸಿಟಿವ್ ದರ ಶೇ10ಕ್ಕೆ ಹೆಚ್ಚಳ ಕಂಡ ಬೆನ್ನಲ್ಲೇ ಗೋವಾ ಗಡಿಯಲ್ಲಿ ಕೊವಿಡ್ ಟೆಸ್ಟಿಂಗ್ ಜೋರಾಗಿದೆ. ಕಾರವಾರದ ಮಾಜಾಳಿಯ ಗೋವಾ ಗಡಿಯಲ್ಲಿ ಭಾರೀ ತಪಾಸಣೆ ನಡೆಸಲಾಗುತ್ತಿದ್ದು, ಉತ್ತರಕನ್ನಡ ಜಿಲ್ಲಾಡಳಿವು ಟೆಸ್ಟಿಂಗನ್ನು ಹೆಚ್ವಿಸಿದೆ.

ಪ್ರತಿ‌ದಿನ 4500 ಜನರಿಗೆ ಕೋವಿಡ್ ಟೆಸ್ಟ್ ಮಾಡಲಾಗುತ್ತಿದೆ. ಈ ಹಿಂದೆ ಪ್ರತಿದಿನ 2500ಜನರಿಗೆ ಮಾತ್ರ ಕೋವಿಡ್ ಟೆಸ್ಟಿಂಗ್ ನಡೆಯುತ್ತಿತ್ತು. ಗೋವಾದಲ್ಲಿ ಹೊಸ ವರ್ಷದ ಸಂಭ್ರಮಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಪ್ರವಾಸಿಗರ ದಿಂಡು ಹರಿದು ಬಂದಿತ್ತು. ಸಾಮಾಜಿಕ ಅಂತರ ಹಾಗೂ ಮಾಸ್ಕ್ ಇಲ್ಲದೇ ಅದ್ಧೂರಿಯಾಗಿ ಸಂಭ್ರಮಿಸಿದ ಪರಿಣಾಮ ಸೋಂಕು ಪ್ರಕರಣದಲ್ಲಿ ಏರಿಕೆ ಕಂಡುಬಂದಿದೆ. ಕಟ್ಟೆಚ್ಚರದ ನಡುವೆಯೂ ಸೋಂಕಿತರು ಜಿಲ್ಲೆಗೆ ಪ್ರವೇಶಿಸುವ ಸಾಧ್ಯತೆ ಇದ್ದು, ಗಡಿಯಲ್ಲಿ ಭೀತಿಯ ವಾತಾವರಣ ಸೃಷ್ಟಿಯಾಗಿದೆ.

Exit mobile version