Site icon PowerTV

ವೀರ ಕನ್ನಡಿಗನಿಂದ ಮಹಾನ್ ಸಾಧನೆ

ಬೆಂಗಳೂರು : ಆಗಸದಲ್ಲಿ ಕನ್ನಡ ಬಾವುಟ ಹಾರಿಸಿದ ಕನ್ನಡ ಪ್ರೇಮಿ ಯುವಕ , ಕನ್ನಡ ಬಾವುಟಕ್ಕೆ ಅವಮಾನ ಮಾಡಿದ್ದಕ್ಕೆ ಈ ರೀತಿಯ ಪ್ರತೀಕಾರ ತೀರಿಸಿದ್ದಾನೆ.

ಮಹಾರಾಷ್ಟ್ರದಲ್ಲಿ ಪುಂಡರು ಕನ್ನಡ ಬಾವುಟ ಸುಟ್ಟ ವಿಚಾರದ ಸಲುವಾಗಿ ಕನ್ನಡಿಗರ ಹೆಮ್ಮೆಯ ಕನ್ನಡದ ಧ್ವಜಕ್ಕೆ ಯಾರೂ ಅವಮಾನ ಮಾಡಲು ಸಾಧ್ಯವಿಲ್ಲ , ಹೀಗೆಂದು 14 ಸಾವಿರ ಮೀಟರ್ (14 ಕಿಲೋಮೀಟರ್ ) ಎತ್ತರದಿಂದ ಸ್ಕೈ ಡೈವ್ ಮಾಡಿ ಕನ್ನಡ ಬಾವುಟವನ್ನು ಹಾರಿಸಿದ್ದಾನೆ.

ತನ್ನ ಪ್ರಾಣದ ಹಂಗುತೊರೆದು ಆಗಸದಲ್ಲಿ ಕನ್ನಡ ಬಾವುಟವನ್ನು ಹಾರಿಸಿದ ಯುವಕ ಪುಂಡರಿಂದ ಕನ್ನಡ ಬಾವುಟಕ್ಕೆ ಅವಮಾನ ಆಗಿದ್ದರಿಂದ ಬೇಸರಗೊಂಡು ಆಗಸದಲ್ಲಿ ಕನ್ನಡ ಬಾವುಟ ರಾರಾಜಿಸುವಂತೆ ಈತ ಮಾಡಿದ್ದಾನೆ. ಮೂಲತಹಃ ಬೆಂಗಳೂರಿನ ನಾಗರಬಾವಿಯ ಯುವಕನಾಗಿರೋ ಪುರುಷೋತ್ತಮ್ ಶಾಮಾಚಾರ್ ಸದ್ಯ ಥಾಯ್ಲ್ಯಾಂಡ್ನಲ್ಲಿ ಟೆಕ್ಲಿಕಲ್ ಇಂಜಿನಿಯರ್ ಆಗಿರೋ ಪುರುಶೋತ್ತಮ್, ಕನ್ನಡ ಧ್ವಜಕ್ಕೆ ಅವಮಾನವಾದ ಹಿನ್ನಲೆಯಲ್ಲಿ ಸ್ಕೈ ಡೈವ್ ಮಾಡಿ ಕನ್ನಡ ಬಾವುಟವನ್ನು ಹಾರಿಸಿದ್ದಾನೆ.

Exit mobile version