Site icon PowerTV

ಆನೇಕಲ್ ನಲ್ಲಿ ಮತ್ತೆ ಶುರುವಾಗಿದೆ ಆನೆಗಳ ಉಪಟಳ

ಆನೇಕಲ್‌ : ಮತ್ತೆ ಶುರುವಾಗಿದೆ ಆನೆಗಳ ಉಪಟಳ ಮೆಣಸಿಗನ ಹಳ್ಳಿ ಸೋಲೂರು ಬಳಿ 20 ಆನೆಗಳ ಹಿಂಡು ಪ್ರತ್ಯಕ್ಷಗೊಂಡಿದೆ .
ರಾತ್ರಿಯೆಲ್ಲಾ ಸುತ್ತಮುತ್ತಲ ಅನೇಕ ರೀತಿಯ ಬೆಳೆಗಳನ್ನು ಆನೆಗಳ ಹಿಂಡು ನಾಶ ಮಾಡಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಅರಣ್ಯ ಅಧಿಕಾರಿಗಳು ಆನೆಗಳನ್ನು ಕಾಡಿಗಟ್ಟಲು ಹರಸಾಹಸ ಪಡುತ್ತಿದ್ದಾರೆ.

ಆನೆಗಳನ್ನು ನಾಡಿಗೆ ಬರದಂತೆ ತಡೆಯಲು ಅಧಿಕಾರಿಗಳು ಎಷ್ಟೇ ಪ್ರಯತ್ನಪಟ್ಟರೂ ಯಾವುದೇ ಪ್ರಯೋಜನವಿಲ್ಲ ಆಗಾಗ ನಾಡಿನತ್ತ ಆನೆಗಳ ಹಿಂಡು ಬರುವುದರಿಂದ ಗ್ರಾಮಸ್ಥರು ಭಯಭೀತಗೊಂಡಿದ್ದಾರೆ.

Exit mobile version