Site icon PowerTV

‘ಬಿಜೆಪಿಯವರಿಗೆ ಮಾನ ಮರ್ಯಾದೆ ಇದೆಯಾ?’

ಬೆಂಗಳೂರು: ಸಂಸದ ಡಿಕೆ‌ ಸುರೇಶ್ ಹಾಗೂ ಸಚಿವ ಅಶ್ವತ್ಥ್​ ನಾರಾಯಣ ನಡುವಿನ ಕಿತ್ತಾಟಕ್ಕೆ ವಿಚಾರಕ್ಕೆ ಸಂಬಂಧಿಸಿ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗ ರೆಡ್ಡಿ ಹೇಳಿಕೆ ನೀಡಿದ್ದಾರೆ. ಒಬ್ಬ ಮಂತ್ರಿ ಆಡೋ ಮಾತಾ ಇದು? ಸಿಎಂ ಹಾಗೂ ಇತರ ಮಂತ್ರಿಗಳು ವೇದಿಕೆ ಮೇಲೆ ಇದ್ರು. ಸಿಎಂ ಬೊಮ್ಮಾಯಿ ಇಂತವರನ್ನ ಕಿತ್ತು ಬಿಸಾಕಬೇಕು. ಬಿಜೆಪಿಯವರಿಗೆ ಮಾನ ಮರ್ಯಾದೆ ಇದೆಯಾ? ಎಲ್ಲಾ ಗೂಂಡಾಗಳೇ ಇರುವುದು ಬಿಜೆಪಿಯಲ್ಲಿ ಎಂದು ರಾಮಲಿಂಗಾ ರೆಡ್ಡಿ ಅಶ್ವತ್ಥ್​​ ನಾರಾಯಣ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಲ್ಲದೇ, ಬೊಮ್ಮಾಯಿಗೆ ಅಶ್ವಥ್ ನಾರಾಯಣ್ ವಿರುದ್ದ ಮಾತನಾಡಿದ್ದು ಸರಿ ಅನಿಸುತ್ತಾ. ಸುರೇಶ್ ವಿರುದ್ದ ಅಲ್ಲ, ಅಶ್ವಥ್ ನಾರಾಯಣ ವಿರುದ್ದ ಪ್ರತಿಭಟನೆ ಮಾಡಬೇಕು. ಅಶ್ವಥ್ ನಾರಾಯಣ ಏಕವಚನದಲ್ಲಿ ಮಾತನಾಡಿದ್ರು. ಯಾಕೆ ಅವರು ಮಾತನಾಡಬೇಕಾಗಿತ್ತು. ಹಾಗೇ ಮಾತನಾಡಿದರೆ ಸುಮ್ಮನೆ ಇರ್ತರಾ. ಚುನಾವಣೆಯಲ್ಲಿ ಅವರಿಗೆ ಮಂಗಳಾರತಿ ಆಯ್ತಲ್ಲ. 2023ರ ಚುನಾವಣೆಯಲ್ಲಿ ಎಲ್ಲಾ ಗೊತ್ತಾಗುತ್ತೆ ಎಂದು ಗುಡುಗಿದ್ದಾರೆ.

Exit mobile version