Site icon PowerTV

ನಿಮ್ಮ ಬದುಕಲ್ಲಿ ನೆಮ್ಮದಿಯಾಗಿರಲು ಹೀಗೆ ಮಾಡಿ…

ಬದುಕಿನಲ್ಲಿ ಸಾವಿರ ಕಷ್ಟಗಳು ಬರುತ್ತವೆ ಹೋಗುತ್ತವೆ. ಆದರೆ ಯಾವಾಗಲೂ ನಮ್ಮ ಮನಸ್ಸು ಎಷ್ಟು ಗಟ್ಟಿಯಾಗಿರಬೇಕೆಂದರೆ, ಯಾರೇ ನಮ್ಮನ್ನು ಬಿಟ್ಟು ಹೋದರೂ, ನಮ್ಮವರೇ ನಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡಿದರೂ, ಜೀವನವೇ ಬೇಡ ಎನ್ನುವಷ್ಟು ದುಃಖ ನಮ್ಮ ಮನಸ್ಸಿನಲ್ಲಿ ಇದ್ದರೂ, ಹೊರಜಗತ್ತಿಗೆ ತಿಳಿಯದ ಹಾಗೆ ಮುಖದ ಮೇಲೆ ನಗು ತಂದುಕೊಂಡು ನಗುವಷ್ಟು ಗಟ್ಟಿಯಾಗಿರಬೇಕು. ನಮ್ಮಿಂದ ಮಾತ್ರ ನಮ್ಮ ದುಃಖ ಅಥವಾ ನೋವನ್ನ ಕಡಿಮೆ ಮಾಡಿಕೊಳ್ಳುವ ಶಕ್ತಿ ಇರುತ್ತದೆಯೇ ಹೊರತು ಮತ್ಯಾರಿಂದಲೂ ನಮ್ಮ ದುಃಖ ಕಡಿಮೆಯಾಗುವುದಿಲ್ಲ. ಹಾಗಾಗಿ ನಮ್ಮನ್ನ ನಾವು ನಿಯಂತ್ರಣದಲ್ಲಿಟ್ಟುಕೊಳ್ಳಬೇಕೆಂದರೆ ಮೊದಲು ಮಾನಸಿಕವಾಗಿ ಗಟ್ಟಿಯಾಗಿರಬೇಕು.

ಸಿಂಧೂರ, ಪವರ್ ಟಿವಿ

Exit mobile version