Site icon PowerTV

ದೆಹಲಿಯಲ್ಲಿ ವಿಕೆಂಡ್ ಕರ್ಫ್ಯೂ: ಕೊರೊನಾ ಕಂಟ್ರೋಲ್​​ಗೆ ಕಟ್ಟುನಿಟ್ಟಿನಕ್ರಮ

ದೆಹಲಿ : ಕೊರೊನಾ ಸೋಂಕಿತರ ಸಂಖ್ಯೆ ದೆಹಲಿಯಲ್ಲಿ ಗಣನೀಯವಾಗಿ ಹೆಚ್ಚಾಗುತ್ತಿರೋದರಿಂದ ದೆಹಲಿ ಸರ್ಕಾರ ವೀಕ್ ಎಂಡ್ ಕರ್ಪ್ಯೂ ಜಾರಿ ಮಾಡಿದೆ.

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರಿಗೆ ಕೊರೊನಾ ಸೋಂಕು ಧೃಡಪಟ್ಟಿದ್ದು ಸದ್ಯ ಹೋಂ ಐಸೋಲೆಷನ್ ನಲ್ಲಿದ್ದಾರೆ. ಈ ನಡುವೆ ಕೇಜ್ರಿವಾಲ್ ಅವರು ದೆಹಲಿಯಲ್ಲಿ ಕೊರೊನಾ ಸೋಂಕನ್ನು ಕಟ್ಟಿಹಾಕಲು ಮಹತ್ವದ ನಿರ್ಧಾರವನ್ನ ಕೈಗೊಂಡಿದ್ದು ವೀಕೆಂಡ್ ಕರ್ಫ್ಯೂ ಜಾರಿ ಮಾಡಿ ಆದೇಶ ಹೊರಡಿಸಿದ್ದಾರೆ.  ಈ ಆದೇಶದಂತೆ ಶುಕ್ರವಾರ ರಾತ್ರಿ 10 ಗಂಟೆಯಿಂದ ಸೊಮವಾರ ಬೆಳಗ್ಗೆ 5 ಗಂಟೆ ವರೆಗೂ ಅಗತ್ಯ ವಸ್ತುಗಳ್ನ ಹೊರತುಪಡಿಸಿ ಎಲ್ಲವೂ ಬಂದ್ ಆಗಿರುತ್ತೆ.

ರಾಜಧಾನಿ ದೆಹಲಿಯಲ್ಲಿ ದಿನನಿತ್ಯ ಸಾವಿರ ಕೊರೊನಾ ಕೇಸ್ ದಾಖಲಾಗ್ತಿತ್ತು ಆದ್ರೆ ಕಳೆದ ಮೂರ್ನಾಲ್ಕು ದಿನಗಳಿಂದ ಸೋಂಕಿತರ ಸಂಖ್ಯೆ 3 ರಿಂದ 4 ಸಾವಿರ ಸಮೀಪಿಸ್ತಾಯಿದೆ. ಹೀಗಾಗಿ ದೆಹಲಿ ಸರ್ಕಾರ ವಿಕೇಂಡ್​​ ಕರ್ಫ್ಯೂ ಮೊರೆ ಹೊಗಿದ್ದು ಇದ್ರ ಜೊತೆಗೆ ಸರ್ಕಾರಿ ಮತ್ತು ಖಾಸಗಿ ಕಛೇರಿಗಳಲ್ಲಿ ಶೇ 50 ರಷ್ಟು ನೌಕರರರಿಗೆ ಮಾತ್ರ ಅವಕಾಶ ಕೊಟ್ಟಿದ್ದು ಇನ್ನುಳಿದ ಶೇ 50 ರಷ್ಟು ನೌಕರರಿಗೆ ವರ್ಕ್ ಫ್ರಂ ಹೋಮ್ ಗೆ ಸರ್ಕಾರ ಆದೇಶಿಸಿದೆ. ಜೊತೆಗೆ ದೆಹಲಿಯಲ್ಲಿ ಎಲ್ಲಾ ಶಾಲೆಗಳನ್ನೂ ಬಂದ್ ಮಾಡಲಾಗಿದ್ದು ಈ ಮೂಲಕ ಕೊರೊನಾ ಸೋಂಕು ಕಟ್ಟಿಹಾಕಲು ಸರ್ಕಾರ ಮುಂದಾಗಿದೆ.

Exit mobile version