Site icon PowerTV

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗೆ ಕೊರೊನಾ

ದೆಹಲಿ : ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.ಈ ಬಗ್ಗೆ ಕೇಜ್ರಿವಾಲ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಅಧಿಕೃತವಾಗಿ ತಿಳಿಸಿದ್ದಾರೆ.

ನಾನು ಕೊರೊನಾ ಟೆಸ್​ಟ್​ಗೆ ಒಳಗಾಗಿದ್ದೆ.ಅಲ್ಲಿ ಸೋಂಕು ಇರುವುದು ದೃಢಪಟ್ಟಿದೆ. ನನಗೆ ಸೋಂಕಿನ ಗುಣಲಕ್ಷಣಗಳು ಕಡಿಮೆಯಿದ್ದು, ಮನೆಯಲ್ಲಿ ಚಿಕಿತ್ಸೆ ಪಡೆಯುತ್ತೇನೆ. ಕಳೆದ ಕೆಲವು ದಿನಗಳಲ್ಲಿ ನನ್ನನ್ನು ಯಅರು ಯಾರು ಭೇಟಿ ಮಾಡಿದ್ದಾರೋ ಅವರೆಲ್ಲರೂ ದಯವಿಟ್ಟು ಟೆಸ್ಟ್ ಮಾಡಿಸಿಕೊಳ್ಳಿ, ಜೊತೆಗೆ ತಮ್ಮನ್ನು ತಾವು ಕ್ವಾರಂಟೈನ್ ಮಾಡಿಕೊಳ್ಳಬೇಕು ಎಂದು ಪೋಸ್ಟ್ ಮಾಡಿದ್ದಾರೆ.

Exit mobile version