Site icon PowerTV

ರಾಜ್ಯಾದ್ಯಾಂತ ಧನಂಜಯ ಭರ್ಜರಿ ವಿಜಯಯಾತ್ರೆ

ಬಳ್ಳಾರಿ :ಸ್ಯಾಂಡಲ್​ವುಡ್ 2021 ರ ವರ್ಷಾಂತ್ಯವನ್ನು ಅಭೂತಪೂರ್ವ ಗೆಲುವಿನೊಂದಿಗೆ ಮುಕ್ತಾಯಗೊಳಿಸಿದ್ದು, 2022ರಲ್ಲೂ ಜಯಭೇರಿ ಮುಂದುವರೆದಿದೆ. ಧನಂಜಯ್ ಹಾಗೂ ಅಮೃತಾ ಅಯ್ಯಂಗಾರ್ ನಟನೆಯ ಬಡವ ರಾಸ್ಕಲ್ ಚಿತ್ರಕ್ಕೆ ನಾಡಿನೆಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಚಿತ್ರ ಗೆಲುವಿನ ನಾಗಾಲೋಟ ಮುಂದುವರೆಸುತ್ತಿದ್ದು. ಹೌಸ್​ಫುಲ್ ಪ್ರದರ್ಶನ ಕಾಣುತ್ತಿದೆ.

ರಾಜ್ಯಾದ್ಯಂತ ಬಡವ ರಾಸ್ಕಲ್ ಸಿನಿಮಾ ಉತ್ತಮ ಪ್ರದರ್ಶನ ಕಂಡುಬರುತ್ತಿದೆ, ಕುಟುಂಬ ಸಮೇತ ಬಂದು ಸಿನಿಮಾ ನೋಡುತ್ತಾ ಇದ್ದಾರೆಂದು ನಟ ಡಾಲಿ ಧನಂಜಯ್ ಹೇಳಿದ್ದಾರೆ.

ಕುಟುಂಬ ಸಮೇತ ಬಂದು ಈ ಸಿನಿಮಾ ನೋಡುತ್ತಾ ಇದ್ದಾರೆ. ಜನರಿಗೆ ಅಭಿನಂದನೆ ಸಲ್ಲಿಸಲು ರಾಜ್ಯಾದ್ಯಂತ ಪ್ರವಾಸ ಮಾಡುತ್ತಾ ಇದ್ದೇನೆ, ಸಿನಿಮಾ ನೋಡಲು ವಿದ್ಯಾರ್ಥಿಗಳು ಹಾಗೂ ಯುವಕರು ಹೆಚ್ಚೆಚ್ಚು ಬರುತ್ತಾ ಇದ್ದಾರೆ. ಯುವರತ್ನ ಸಿನಿಮಾ ಪ್ರಮೋಷನ್ ಗೆ ಅಪ್ಪು ಸರ್ ಜೊತೆ ಬಳ್ಳಾರಿಗೆ ಬಂದಿದ್ದೆ. ಆಗಲು ಜನರಿಂದ ಉತ್ತಮ ರೆಸ್ಪಾನ್ಸ್ ಬಂದಿತ್ತು, ಈಗಲೂ ಸಾಕೊಷ್ಟು ಪ್ರೀತಿ ತೋರಿಸಿದ್ದಾರೆ. ಬಳ್ಳಾರಿ ಜನರಿಗೆ ನಾನು ಅಭಾರಿಯಾಗಿದ್ದೇನೆ. ಹೊಸಪೇಟೆ ಬಳಿಕ ಬೆಂಗಳೂರಿಗೆ ಹೋಗುತ್ತಿದ್ದೇನೆ, ಆದರೆ ಕೋವಿಡ್ ನಿಯಂತ್ರಣಕ್ಕೆ ಸರ್ಕಾರ ಯಾವ ಕ್ರಮಕೈಗೊಳ್ಳುತ್ತಾರೆ ನೋಡಿ ಮುಂದುವರೆಯುವೆ ಎಂದು ಬಳ್ಳಾರಿಯಲ್ಲಿ ಡಾಲಿ ಧನಂಜಯ್ ಹೇಳಿದ್ದಾರೆ.

Exit mobile version