Site icon PowerTV

ಹಾಟ್ ಸನ್ನಿ ಲಿಯೋನ್​ನ 7 ಚಿತ್ರಗಳು ಬಿಡುಗಡೆಗೆ ಸಿದ್ದ

ಮುಂಬೈ: ಸನ್ನಿ ಲಿಯೋನ್ ಎಂಬ ಪೋರ್ನ್​ ನಟಿ ಗೊತ್ತಾ ನಿಮಗೆ? ಇಡೀ ಜಗತ್ತಿನಲ್ಲಿ ತನ್ನ ಮೈಮಾಟದಿಂದಲೇ ಕೋಟಿ ಕೋಟಿ ರಸಿಕರನ್ನು ಸೆಳೆದಿದ್ದ ಸನ್ನಿಲಿಯೋನ್ ನಂತರ ಜಿಸ್ಮ್ ಚಿತ್ರದ ಮೂಲಕ ಬಾಲಿವುಡ್ ಹಿರೋಯಿನ್ ಆಗಿ ರಾತ್ರೋ ರಾತ್ರಿ ನಾಯಕಿಯೆನಿಸಿಕೊಂಡರು. ಸಿಖ್ ಪರಿವಾರದ ಸನ್ನಿ ಲಿಯೋನ್ ಕೆನಡಾದಲ್ಲಿ ಹುಟ್ಟಿದವರು. ಕೆನಡಾ ಹಾಗೂ ಅಮೆರಿಕ ಎರಡರ ನಾಗರಿಕತ್ವ ಹೊಂದಿರುವ ಸನ್ನಿ ಲಿಯೋನ್ ಹಾಲಿವುಡ್ ಹಾಗೂ ಬಾಲಿವುಡ್​ನಲ್ಲಿ ನಾಯಕಿಯಾಗಿ ಮಿಂಚುವ ಮುನ್ನ ಪೋರ್ನ್​ ನಟಿಯಾಗಿದ್ದವರು.

ಇದೀಗ 40ರ ಹರೆಯದ ಸನ್ನಿ ಲಿಯೋನ್ ಯಾವ ಯುವನಾಯಕಿಗೂ ಕಡಿಮೆಯಿಲ್ಲದಂತೆ ಬಿಜಿಯಾಗಿರುವುದು ಅವರ ಈಗ ಬಿಡುಗಡೆಗೆ ಸಿದ್ದವಿರುವ ಸಿನಿಮಾಗಳನ್ನು ನೋಡಿದರೆ ತಿಳಿಯುತ್ತದೆ. ಸನ್ನಿ ಲಿಯೋನ್ ನಾಯಕಿಯಾಗಿರುವ 7 ಸಿನಿಮಾಗಳು ಇದೇ ವರ್ಷದಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ತಮಿಳು, ತೆಲುಗು, ಮಲೆಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಈ ಸಿನಿಮಾಗಳು ನಿರ್ಮಾಣವಾಗುತ್ತಿವೆ.

ಹಿಂದಿಯಲ್ಲಿ ನಿರ್ಮಾಣವಾಗುತ್ತಿರುವ ಕೋಕಾಕೋಲ, ಹೆಲೆನ್ ಮತ್ತು ಓ ಮೈಘೋಸ್ಟ್ ಚಲನಚಿತ್ರಗಳು ಇದೇ ವರ್ಷ ಬಿಡುಗಡೆಯಾಗಲಿವೆ. 2022ರ ಹೊಸವರ್ಷವನ್ನು ಗೋವಾದಲ್ಲಿ ಆಚರಿಸುವ ಮೂಲಕ ಸುದ್ದಿಯಾಗಿದ್ದ ಸನ್ನಿಲಿಯೋನ್ ಅಲ್ಲಿ ಸಂಭ್ರಮಿಸಿದ್ದ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಸಖತ್ ಸುದ್ದಿಯಾಗಿದ್ದರು.

ಓಂಪ್ರಕಾಶ್ ನಾಯಕ್

Exit mobile version